ಕನ್ನಡದ ಹೆಸರಾಂತ ನಿರೂಪಕಿ, ನಟಿ ಅನುಶ್ರೀ ಅವರು ಕೊಡಗು ಮೂಲದ ರೋಷನ್ ಜೊತೆ ಆ.28 ರಂದು ಮದುವೆಯಾಗುತ್ತಿದ್ದು, ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ರಾಮಮೂರ್ತಿ ಅವರ ಪುತ್ರ ರೋಷನ್ ಅವರನ್ನು ಅಂದು ಬೆಳಗ್ಗೆ 10:56ಕ್ಕೆ ಅನುಶ್ರಿ ವಿವಾಹವಾಗಲಿದ್ದಾರೆ.
” ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ” ಎಂದು ಅನುಶ್ರೀ ಆಮಂತ್ರಣ ಪತ್ರಿಕೆಯಲ್ಲಿ ಬರೆಯಿಸಿದ್ದಾರೆ. ಅನುಶ್ರೀಯ ಮದುವೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳು, ಸಭೆ ಸಮಾರಂಭಗಳಲ್ಲಿ ಯಾವಾಗ, ಹುಡುಗ ಯಾರು ಇವೇ ಪ್ರಶ್ನೆಗಳು ಎದುರಾಗುತ್ತಿದ್ದವು. ಕೆಲವೊಂದು ಜಾಲತಾಣಗಳಲ್ಲಿ ಅವರು ಮದುವೆಯಾದರೆಂಬ ಸುದ್ದಿಗಳು ಕೂಡ ಸಾಕಷ್ಟು ಬಾರಿ ಹರಿದಾಡಿವೆ. ಈಗ ಕೊನೆಗೂ ಅನುಶ್ರೀ ಮದುವೆಯಾಗುತ್ತಿರುರುವ ಮೂಲಕ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡುತ್ತಿದ್ದಾರೆ.
ಅನುಶ್ರೀ ಮದುವೆಯಾಗುತ್ತಿರುವ ರೋಷನ್ ಹಿಂದೂ ಹುಡುಗ ಅಲ್ಲ ಎಂದು ಸಾಮಾಜಿಕ ಮಾಧ್ಯಮ ಕೀಳು ಅಭಿರುಚಿಯ ಸುದ್ದಿ ಹರಡಿದ್ದು, ಇದನ್ನು ನೋಡಿದವರು, ಆತನನ್ನು ಯಾಕೆ ಮದುವೆಯಾಗುತ್ತಿದ್ದೀರಿ, ಬೇರೆ ಯಾರೂ ಹಿಂದೂ ಹುಡುಗ ಸಿಗಲಿಲ್ಲವೇ ಎಂದು ಪ್ರಶ್ನಿಸಿದ್ದಲ್ಲದೆ ಆಕ್ರೋಶ ವ್ಯಕ್ತಪಡಿಸಿದ್ದರು.