Tuesday, November 11, 2025
Menu

ಬೆಂಗಳೂರಿನಲ್ಲಿ ನಾಳೆ ಅನಂತಕುಮಾರ್ ಸ್ಮೃತಿ ದಿನ, ಪಂಜಿನ ಮೆರವಣಿಗೆ

ಬೆಂಗಳೂರು: ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಚ್.ಎನ್. ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಇದೇ ನವೆಂಬರ್ ೧೨ರಂದು ಅನಂತಕುಮಾರ್ ಪ್ರತಿಷ್ಠಾನವು ಬೆಂಗಳೂರಿನಲ್ಲಿ ಏರ್ಪಡಿಸಿದೆ. ಈ ಸಂದರ್ಭದಲ್ಲಿ ಪಂಜಿನ ಮೆರವಣಿಗೆಯನ್ನು ಆಯೋಜಿಸಲಾಗಿದೆ.

ನ. 12 ರಂದು ಸಂಜೆ 5.30ಕ್ಕೆ ಸೌಥ್ ಎಂಡ್ ಸರ್ಕಲ್ ಬಳಿ ಇರುವ ಅನಂತ ಪ್ರೇರಣಾ ದಿಂದ ಸಂಜೆ 5.30ಕ್ಕೆ ಪಂಜಿನ ಮೆರವಣಿಗೆ ಆರಂಭವಾಗುವುದು. ಬಳಿಕ 7 ಗಂಟೆಯ ವೇಳೆಗೆ ಉತ್ತರಾದಿ ಮಠ (ನ್ಯಾಷನಲ್ ಹೈಸ್ಕೂಲ್ ಎದುರು, ಬಸವನಗುಡಿ) ಬಳಿ ಮೆರವಣಿಗೆಯು ಮುಕ್ತಾಯಗೊಳ್ಳುವುದು.

ಈ ಸಂದರ್ಭದಲ್ಲಿ ಕನ್ನಡ ನಾಡನ್ನು ಆಳಿದ ರಾಜರುಗಳಾದ ಬಾದಾಮಿ ಚಾಲುಕ್ಯ ವಂಶದ ಇಮ್ಮಡಿ ಪುಲಕೇಶಿ, ವಿಶ್ವವಿಖ್ಯಾತ ಕೈಲಾಸ ದೇವಾಲಯ ಕಟ್ಟಿಸಿದ ರಾಷ್ಟ್ರಕೂಟ ದೊರೆ ಒಂದನೇ ಕೃಷ್ಣ, ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗ, ಹೊಯ್ಸಳ ದೊರೆ ವಿಷ್ಣುವರ್ಧನ, ವಿಜಯನಗರ ಸಂಸ್ಥಾಪಕರಾದ ಹಕ್ಕ-ಬುಕ್ಕರು, ವಿಜಯನಗರ ಅರಸ ಕೃಷ್ಣದೇವರಾಯ, ಕೆಳದಿಯ ಶಿವಪ್ಪ ನಾಯಕ, ಮೈಸೂರು ಸಂಸ್ಥಾನದ ಮಹಾರಾಜರಾದ ಕೃಷ್ಣರಾಜ ಒಡೆಯರ, ರಾಣಿ ಅಬ್ಬಕ್ಕದೇವಿ, ಗೇರುಸೊಪ್ಪೆಯ ಚೆನ್ನಭೈರಾದೇವಿ, ಕೆಳದಿಯ ಮಹಾರಾಣಿ ಚೆನ್ನಮ್ಮ, ಕಿತ್ತೂರು ರಾಣಿ ಚೆನ್ನಮ್ಮದೇವಿ- ಅವರ ಸಂಸ್ಮರಣೆಯೂ ನಡೆಯಲಿದೆ.

Related Posts

Leave a Reply

Your email address will not be published. Required fields are marked *