ಮುಂದಿನ ದಿನಗಳಲ್ಲಿ ದೇಶದಲ್ಲಿನ ಉಗ್ರರ ಚಟುವಟಿಕೆಗಳನ್ನು ಯುದ್ಧವೆಂದು ಪರಿಗಣಿಸಿ ಸೂಕ್ತ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಉಗ್ರರ ದಾಳಿ ಹಿನ್ನೆಲೆಯಲ್ಲಿ ಉಂಟಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಣ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶನಿವಾರ ನಡೆದ ಸೇನಾಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.
ಪಾಕಿಸ್ತಾನದ ದಾಳಿಯಲ್ಲಿ ಉದಂಪುರ್, ಪಟಾನ್ ಕೋಟ್, ಅದಂಪುರ್ ಮತ್ತು ಬುಜ್ ನಗರಗಳಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನದ 6 ವಾಯುನೆಲೆಗಳಾದ ರಫಿಕಿ, ಮುರಿದ್, ಚಕ್ಲಾಲ, ರಹಿಂ ಯಾರ್ ಖಾನ್, ಸುಕ್ಕುರ್, ಮತ್ತು ಚುನಿಯಾಗಳ ಮೇಲೆ ದಾಳಿ ನಡೆಸಿತ್ತು.
ಅಂತಾರಾಷ್ಟ್ರೀಯ ಕಾನೂನು ಪ್ರಕಾರ ಯಾವುದೇ ದೇಶ ತನ್ನ ದೇಶದ ಪ್ರಜೆಗಳನ್ನು ಒತ್ತೆಯಾಳು ಇರಿಸಿಕೊಂಡರೆ ಅಥವಾ ಶಸ್ತ್ರಾಸ್ತ್ರ ಹಿಡಿದು ದಾಳಿಗೆ ಯತ್ನಿಸಿದರೆ ಪ್ರತಿಕ್ರಿಯೆ ನೀಡಿದರೆ ಅದನ್ನು ಯುದ್ಧ ಎಂದು ಪರಿಗಣಿಸಲಾಗುತ್ತದೆ.