ಟೆಲ್ ಅವೀವ್: ತನಗೆ ಬಾಂಬ್‌ಗಳ ಪೂರೈಕೆಯ ಮೇಲಿನ ನಿಷೇಧವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಹಾಕಿದ ಮೂರು ವಾರಗಳ ನಂತರ, ಭಾರಿ ವಿನಾಶಕ ಬಾಂಬ್‌ಗಳು ತನ್ನ ತೀರವನ್ನು ತಲುಪಿದೆ ಎಂದು ಇಸ್ರೇಲ್ ಘೋಷಿಸಿದೆ.
ಗಾಝಾದಲ್ಲಿನ ನಾಗರಿಕರ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಬೈಡನ್ ಆಡಳಿತವು ಇಸ್ರೇಲ್‌ಗೆ 2000 ಪೌಂಡ್ ಬಾಂಬ್‌ಗಳ ಪೂರೈಕೆಯನ್ನು ತಡೆಹಿಡಿದಿತ್ತು.
ಈಗ ಎಂಕೆ -48 2000-ಪೌಂಡ್ ಶಸ್ತ್ರಾಸ್ತ್ರಗಳನ್ನು ಹೊತ್ತ ಹಡಗುಗಳು ದೇಶವನ್ನು ತಲುಪಿದವು. ನಂತರ ಅವುಗಳನ್ನು ಬೃಹತ್ ಟ್ರಕ್ ಗಳಲ್ಲಿ ಮಿಲಿಟರಿ ವಾಯುನೆಲೆಗಳಿಗೆ ಸಾಗಿಸಲಾಯಿತು.
ಬಾಂಬ್‌ಗಳಿಗಾಗಿ ಟ್ರಂಪ್ ಅವರನ್ನು ಶ್ಲಾಘಿಸಿದ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು ಇದು “ವಾಯುಪಡೆ ಮತ್ತು ಐಡಿಎಫ್‌ಗೆ ಇನ್ನಷ್ಟು ಬಲ ನೀಡುತ್ತದೆ ಮತ್ತು ಉಭಯ ದೇಸಗಳ ನಡುವಿನ ಮೈತ್ರಿಗೆ ಪುರಾವೆಯಾಗಿದೆ” ಎಂದರು.
900 ಕೆಜಿ ತೂಕದ ಈ ಭಾರೀ ಬಾಂಬ್ ಅನ್ನು ಸಂರಕ್ಷಿತ ಕಟ್ಟಡಗಳು, ರೈಲು ಯಾರ್ಡ್‌ಗಳು ಮತ್ತು ಸಂವಹನ ಮಾರ್ಗಗಳಂತಹ ಗುರಿಗಳನ್ನು ನಾಶಪಡಿಸಲು ಯುಎಸ್ ವಾಯುಪಡೆ ಬಳಸುತ್ತದೆ.
ಇದು ವಿಯೆಟ್ನಾಂ ಯುದ್ಧದ ಸಮಯದಲ್ಲಿ ಸೇವೆಗೆ ಪ್ರವೇಶಿಸಿದ ಸಾಮಾನ್ಯ ಉದ್ದೇಶದ ಬಾಂಬ್ ಆಗಿದೆ.