ವಾಷಿಂಗ್ಟನ್: ಭಾರತ ಸರಕು ಸಾಗಾಣೆ ವಸ್ತುಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಡ ಕೂಡ ವಿಧಿಸಿದ್ದಾರೆ.
ಅಮೆರಿಕ ಅಧ್ಯಕ್ಷರ ಹೆಸರಿನಲ್ಲಿರುವ ಎಕ್ಸ್ ಖಾತೆಯಲ್ಲಿ ಬುಧವಾರ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ನೂತನ ಸುಂಕ ಆಗಸ್ಟ್ 1ರಿಂದ ನೂತನ ಸುಂಕ ಜಾರಿಗೆ ಬರಲಿ ಎಂದು ಹೇಳಿದ್ದಾರೆ.
ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ತೈಲ ಮತ್ತು ಶಸ್ತ್ರಾಸ್ತ್ರ ಖರೀದಿಸುತ್ತಿರುವ ಸ್ನೇಹಿತ ಭಾರತದ ಮೇಲೆ ಶೇ.25ರಷ್ಟು ತೆರಿಗೆ ವಿಧಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಭಾರತ ನಮ್ಮ ಸ್ನೇಹ ರಾಷ್ಟ್ರ. ಆದರೆ ಬೇರೆ ರಾಷ್ಟ್ರಗಳ ಮೇಲೆ ಅತೀ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಯಾವುದೇ ದೇಶದಕ್ಕಿಂತ ಅತ್ಯಂತ ಕಠಿಣ ಮತ್ತು ಕೆಟ್ಟ ವಿತ್ತಿಯ ಅಡೆತಡೆಗಳನ್ನು ಹೊಂದಿದೆ ಎಂದು ಟ್ರಂಪ್ ಕುಟುಕಿದ್ದಾರೆ.
ನಮ್ಮ ಈ ನಿಲುವುಗಳಿಂದ ರಷ್ಯಾ ಯುದ್ಧಕ್ಕೆ ಭಾರತ ಮತ್ತು ಚೀನಾ ಪರೋಕ್ಷವಾಗಿ ನೆರವು ನೀಡುತ್ತಿದೆ. 3 ವರ್ಷಗಳಷ್ಟು ಹಳೆಯದಾದ ಉಕ್ರೇನ್ ಮೇಲಿನ ರಷ್ಯಾ ಯುದ್ಧ ಕೊನೆಗೊಳ್ಳಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.