ಮಂಡ್ಯದ ಶ್ರೀರಂಗಪಟ್ಟಣದ ಷಹೀದ್ ಟಿಪ್ಪು ವಕ್ಫ್ ಎಸ್ಟೇಟ್ ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಮೈಸೂರಿನ ಶಾಸಕ ಹಾಗೂ ಟಿಪ್ಪು ವಕ್ಫ್ ಕಮಿಟಿ ಅಧ್ಯಕ್ಷ ತನ್ವೀರ್ ಸೇಠ್ ಹಾಗೂ ಕಾರ್ಯದರ್ಶಿ ಇರ್ಫಾನ್ ವಿರುದ್ಧ ಭ್ರಷ್ಟಾಚಾರ ಹಾಗೂ ಅಧಿಕಾರ ದುರ್ಬಳಕೆ ಆರೋಪ ಎದುರಾಗಿದ್ದು, ಟಿಪ್ಪು ಷಹೀದ್ ವಕ್ಫ್ ಎಸ್ಟೇಟ್ ವಿರುದ್ಧ ಸ್ಥಳೀಯ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಅಲೀಮ್ ಉಲ್ಲಾ ಷರೀಫ್ ಭ್ರಷ್ಟಾಚಾರ ಮತ್ತು ನಿಯಮ ಬೈಲಾ ನಿಯಮ ಉಲ್ಲಂಘನೆ ಬಗ್ಗೆ ದಾಖಲೆ ಸಮೇತ ಆರೋಪ ಮಾಡಿದ್ದಾರೆ. ಕಮಿಟಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿ ಇಬ್ಬರೂ ವಕ್ಫ್ ಬೋರ್ಡ್ ಬೈಲಾ ನಿಯಮ ಉಲ್ಲಂಘಿಸಿ ಅಧಿಕಾರ ನಡೆಸುತ್ತಿರುವುದಾಗಿ ದೂರಿದ್ದಾರೆ.
ಕಮಿಟಿ ಬೈಲಾ ಪ್ರಕಾರ ಅಧ್ಯಕ್ಷ ಮತ್ತು ಕಾರ್ಯದರ್ಶಿ ಗೆ 3 ವರ್ಷದ ಎರಡು ಅವಧಿಗೆ ಮಾತ್ರ ಅಧಿಕಾರವಿರುತ್ತದೆ. ಕಾರ್ಯದರ್ಶಿ ಹುದ್ದಗೆ ಶಿಕ್ಷಣ ಇಲಾಖೆ ಅಥವಾ ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿಯಾಗಿರಬೇಕೆಂಬ ನಿಯಮವಿದೆ. ಈ ನಿಯಮ ಉಲ್ಲಂಘಿಸಿ ಕಮಿಟಿ ಅಧ್ಯಕ್ಷರಾಗಿ ಕಳೆದ 15 ವರ್ಷಗಳಿಂದ ಮೈಸೂರಿನ ಶಾಸಕ ತನ್ವೀರ್ ಸೇಠ್ ಅಧಿಕಾರ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇರ್ಫಾನ್ ಯಾವುದೇ ಇಲಾಖೆಯಲ್ಲಿ ಸೇವೆ ಸಲ್ಲಿಸದೆ 20 ವರ್ಷದಿಂದ ಕಾರ್ಯದರ್ಶಿಯಾಗಿ ಅಧಿಕಾರ ನಡೆಸುತ್ತಿದ್ದಾರೆ. ಕಮಿಟಿಗೆ ಬಂದ ಸರ್ಕಾರದ ಕೋಟ್ಯಾಂತರ ರೂ. ಅನುದಾನ ಸೇರಿ ಬರುವ ಆದಾಯಕ್ಕೆ ಲೆಕ್ಕ ಕೊಡದೆ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಅಕ್ರಮ ಪ್ರಶ್ನಿಸಿದವರಿಗೆ ಕಮಿಟಿ ಸರ್ಕಾರದ ಆಸ್ತಿಯಲ್ಲ ಎಂದು ಹೆದರಿಸಿ ದಬ್ಬಾಳಿಕೆ ನಡೆಸುತ್ತಾರೆ ಎಂದು ಕಮಿಟಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ ವಿರುದ್ಧ ಡಿಸಿ ಸೇರಿ ರಾಜ್ಯ ವಕ್ಫ್ ಮಂಡಳಿಗೆ ಮುಸ್ಲಿಂ ಮುಖಂಡರು ಮನವಿ ಮಾಡಿದ್ದಾರೆ. ಕಮಿಟಿಯ ಅಕ್ರಮದ ವಿರುದ್ಧ ತನಿಖೆ ನಡೆಸಲು ಕೇಂದ್ರಕ್ಕೆ ದೂರು ನೀಡಿದ್ದಾರೆ. ತನಿಖೆಗೆ ರಾಜ್ಯ ಸರ್ಕಾರ ಮುಂದ ಮುಂದಾಗದಿದಿದ್ದರೆ ಕೇಂದ್ರಕ್ಕೆ ದೂರು ನೀಡಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ಎಚ್ಚರಿಕೆ ನೀಡಿದ್ದಾರೆ.