Menu

133 ಅಕ್ಕಿಮೇಲೆ ರಾಷ್ಟ್ರಗೀತೆ ಬರೆದ ಐಶ್ವರ್ಯ: ಇಂಡಿಯಾ ಬುಕ್‌ ಆಫ್ ರೆಕಾರ್ಡ್‌ ಸೇರ್ಪಡೆ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹುಲಿಗುಡ್ಡ ಗ್ರಾಮದ ಯುವತಿ ಐಶ್ವರ್ಯ 32 ನಿಮಿಷ 20 ಸೆಕೆಂಡ್ ಗಳಲ್ಲಿ 133 ಅಕ್ಕಿಗಳ ಮೇಲೆ ಕನ್ನಡದಲ್ಲಿ ರಾಷ್ಟ್ರಗೀತೆ ಬರೆದು ಇಂಡಿಯಾ ಬುಕ್‌ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿ  ದಾಖಲೆ ನಿರ್ಮಾಣ ಮಾಡಿದ್ದಾರೆ.

ಪಟ್ಟಣದ ಸಂಜೀವ್ ಬಿ.ಇಡಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಐಶ್ವರ್ಯ, ಐಶ್ವರ್ಯ ಕೆಲವು ತಿಂಗಳು ಹಿಂದೆ ಅವಲಕ್ಕಿ ಮೇಲೆ ರಾಷ್ಟ್ರಗೀತೆ ಬರೆದು ದಾಖಲೆ ಮಾಡಿದ್ದರು. ಅದರಿಂದ ಪ್ರೇರಿತರಾಗಿ ಅಕ್ಕಿ ಕಾಳುಗಳ ಮೇಲೆ ರಾಷ್ಟ್ರಗೀತೆ ಬರೆದು ಸಾಧನೆ ತೋರಿದ್ದಾರೆ.

ಜನವರಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಗೆ ಇದನ್ನು ಕಳಿಸಿದ್ದು, ಆ ಸಂಸ್ಥೆಯವರು ಪರಿಶೀಲನೆ ನಡೆಸಿ ಫೆಬ್ರುವರಿ 5ರಂದು ಅಧಿಕೃತವಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಿಸಿದ್ದಾರೆ.   ಇಂಡಿಯಾ ಬುಕ್ ಆಫ್ ರೆಕಾರ್ಡ್ ‌ ಐಶ್ವರ್ಯ ಅವರಿಗೆ ಪದಕ ಹಾಗೂ ಪ್ರಮಾಣ ಪತ್ರ ಕಳುಹಿಸಿದೆ.

Related Posts

Leave a Reply

Your email address will not be published. Required fields are marked *