ಏರ್ ಶೋ 2025 ಹಾಗೂ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಡಿಕೊಂಡಿರುವ ಸಿದ್ದತೆಗಳ ಕುರಿತು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಫೆ. 10 ರಿಂದ 14 ರವರೆಗೆ ಏರ್ ಶೋ 2025 ಹಾಗೂ ಫೆ. 11 ರಿಂದ 14 ರವರೆಗೆ ಜಾಗತೀಕ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ವಿವಿಧ ದೇಶ ಹಾಗೂ ರಾಷ್ಟ್ರಗಳಿಂದ ಗಣ್ಯರು, ಹೂಡಿಕೆದಾರರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಬೆಂಗಳೂರು ನಗರ ಆಕರ್ಷಣೀಯವಾಗಿ ಕಾಣುವ ದೃಷ್ಟಿಯಿಂದ ಆಯ್ದ ಪ್ರಮುಖ ಜಂಕ್ಷನ್ ಗಳ ಸುಂದರೀಕರಣ, ಥರ್ಮೋಪ್ಲಾಸ್ಟಿಕ್ ಲೇನ್ ಮಾರ್ಕಿಂಗ್, ಝೀರೋ ಟಾಲರೆನ್ಸ್ ವಲಯಗಳು, ಕ್ಯಾಟ್ ಐಸ್ ಅಳವಡಿಕೆ, ಅಪಾಯ ಫಲಕ ಅಳವಡಿಕೆ, ಮೀಡಿಯನ್ಸ್ ಗಳ ಎತ್ತಿರಿಸುವಿಕೆ, ಕಬ್ಬಿಣದ ಗ್ರಿಲ್‌ಗಳ ಅಳವಡಿಕೆ, ಅತ್ಯಾಧುನಿಕ ಕೋಲ್ಡ್ ಮಿಕ್ಸ್ ವಿನ್ಯಾಸಗಳ ಪೇಂಟಿಂಗ್, ಪಾದಚಾರಿ ದಾಟುವಿಕೆಯ ಮಾರ್ಕಿಂಗ್ ಸೇರಿದಂತೆ ಇನ್ನಿತರ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ಮುಖ್ಯ ಆಯುಕ್ತರು ಹಡ್ಸನ್ ವೃತ್ತ, ಶಾಸಕರ ಭವನ ವೃತ್ತ, ಕಲ್ಪನಾ ಜಂಕ್ಷನ್, ಮೌಂಟ್ ಕಾರ್ಮಲ್ ಕಾಲೇಜು ಬಳಿಯ ವೃತ್ತ, ಗುಟ್ಟಹಳ್ಳಿ ಬಸ್ ನಿಲ್ದಾಣ, ಮೇಕ್ರಿ ವೃತ್ತ, ಮೇಕ್ರಿ ಬಸ್ ನಿಲ್ದಾಣ, ಜಿಕೆವಿಕೆ ಪಾರ್ಕಿಂಗ್ ಸ್ಥಳ ಹಾಗೂ ನಿಟ್ಟಿ ಮೀನಾಕ್ಷಿ ಕಾಲೇಜು ರಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಡ್ಸನ್ ವೃತ್ತದ ಬಳಿಯ ವೃತ್ತದ ಬಳಿ ಎಲ್.ಇ.ಡಿ ಕರ್ಬ್ ಕಾಮಗಾರಿ, ಲ್ಯಾಂಡ್ ಸ್ಕೇಪ್, ಫೌಂಟೇನ್, ಲೈಟಿಂಗ್ ಹಾಗೂ ಜಂಕ್ಷನ್ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ ಶೀಘ್ರ ಪೂರ್ಣಗೊಳಿಸಲು ಸೂಚನೆ ನೀಡಿದರು. ಈ ವೇಳೆ ಅನಧಿಕೃತವಾಗಿ ಅಳವಡಿಸಿದ್ದ ಓಎಫ್‌ಸಿ ಕೇಬಲ್ ತೆರವುಗೊಳಿಸಲು ಸೂಚನೆ ನೀಡಿದರು.
ರಾಜಭವನದ ಬಳಿ ಮಾರ್ಕಿಂಗ್ ಗೋಸ್ಟ್ ಐಲ್ಯಾಂಡ್ ಹಾಗು ಝೀರೋ ಟಾಲರೆನ್ಸ್ ಮಾಡಿರುವುದನ್ನು , ಕಲ್ಪನಾ ಜಂಕ್ಷನ್ ಬಳಿ ಝೀರೋ ಟಾಲರೆನ್ಸ್ ಹಾಗೂ ಫೆಡೆಸ್ಟ್ರಿಯನ್ ಕ್ರಾಸಿಂಗ್ಸ್ ಮಾರ್ಕಿಂಗ್ ಪರಿಶೀಲಿಸಿದರು.
ಮೌಂಟ್ ಕಾರ್ಮಲ್ ಕಾಲೇಜಿನ ಬಳಿಯಿರುವ ಜಂಕ್ಷನ್ ಬಳಿ ಝೀರೋ ಟಾಲರೆನ್ಸ್ ಮಾರ್ಕಿಂಗ್, ಎಲ್.ಇ.ಡಿ ಕರ್ಬ್ ಪರಿಶೀಲಿಸಿದರು. ಈ ವೇಳೆ ರಸ್ತೆಯ ಸೈಡ್ ಮಾರ್ಕಿಂಗ್ ಮಾಡಲು ಸೂಚಿಸಿ ಆಳಾಗಿದ್ದ ಸ್ಲ್ಯಾಬ್ ಅನ್ನು ಕೂಡಲೆ ಬದಲಾಯಿಸಲು ಸೂಚನೆ ನೀಡಿದರು.
ಗುಟ್ಟಹಳ್ಳಿ ಬಸ್ ನಿಲ್ದಾಣದ ಬಳಿ ಜಟಕಾ ಸ್ಟಾಂಡ್ ಕಡೆಯಿಂದ ಬರುವ ರಸ್ತೆಗೆ ಕೂಡಲೆ ಡಾಂಬರೀಕರಣ ಮಾಡಲು ಸೂಚನೆ ನೀಡಿದರು. ಆ ಬಳಿಕ ಮೇಕ್ರಿ ಬಸ್ ನಿಲ್ದಾಣ ಬಳಿ ಸ್ವಚ್ಛತೆ ಕಾಪಾಡಲು ತಿಳಿಸಿದರು. ಅನಂತರ ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗ ಸೈಡ್ ಗ್ರಿಲ್ ಕಾಮಗಾರಿ ನಡೆಯುತ್ತಿದ್ದು, ಅದನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಿದರು.
ಜಿಕೆವಿಕೆಯಲ್ಲಿ ವ್ಯವಸ್ಥೆ ಮಾಡಿರುವ ಪಾರ್ಕಿಂಗ್ ಸ್ಥಳ ಪರಿಶೀಲಿಸಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ವಾಹನ ಚಾಲಕರಿಗಾಗಿ ಸಂಚಾರಿ ಇಂದಿರಾ ಕ್ಯಾಂಟೀನ್ ವ್ಯವಸ್ಥೆ, ಇ ಟಾಯ್ಲೆಟ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿರಬೇಕು. ಬಿಎಂಟಿಸಿ ವತಿಯಿಂದ ಬಸ್ ವ್ಯವಸ್ಥೆ ಹಾಗೂ ಧೂಳು ಬಾರದಂತೆ ನೀರು ಸಿಂಪಡಣೆ ಮಾಡಲು ಸೂಚನೆ ನೀಡಿದರು.
ನಗರದಲ್ಲಿ ಇದೇ ಮೊದಲಬಾರಿಗೆ ಪೊಲೀಸ್ ವೃತ್ತ(ಹಡ್ಸನ್ ವೃತ್ತ), ವಿಧಾನಸೌಧದ ಶಾಸಕರ ಭವನದ ಬಳಿಯ ವೃತ್ತ ಹಾಗೂ ಮೌಂಟ್ ಕಾರ್ಮಲ್ ಕಾಲೇಜು ಬಳಿಯ ವೃತ್ತದ ಬಳಿಕ ಎಲ್.ಇ.ಡಿ ಕರ್ಬ್ಸ್(ಎಫ್.ಆರ್.ಫಿ) ಅಳವಡಿಕೆ ಮಾಡಲಾಗುತ್ತಿದೆ. ವಾಹನಗ ಸಂಚಾರದ ವೇಳೆ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಆಕರ್ಷಕವಾಗಿ ಕಾಣುವ ದೃಷ್ಟಿಯಿಂದ ಎಲ್.ಇ.ಡಿ ಕರ್ಬ್ಸ್ ಗಳನ್ನು ಅಳವಡಿಸಲಾಗಿದೆ.