ಆಗ್ರಾದಲ್ಲಿ ಭಾರತೀಯ ವಾಯುಸೇನೆ ಅಧಿಕಾರಿಯೊಬ್ಬರು ಡೆಮೊ ಡ್ರಾಪ್ ವೇಳೆ ಜಂಪ್ ಮಾಡುವಾಗ ವಿಮಾನದ ಪ್ಯಾರಾಚೂಟ್ ತೆರದುಕೊಳ್ಳದ ಕಾರಣ ಅಪಘಾತವುಂಟಾಗಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ವಾಯುಸೇನೆಯ ಇನ್ಸ್ಟ್ರಕ್ಟರ್, ಆಕಾಶ್ ಗಂಗಾ ಸ್ಕೈಡೈವಿಂಗ್ ತಂಡದ ಪ್ಯಾರಾ ಜಂಪ್ ಬೋಧಕ 41 ವರ್ಷದ ವಾರಂಟ್ ಆಫೀಸರ್ ರಾಮ್‌ಕುಮಾರ್ ತಿವಾರಿ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರು.
ವಿಮಾನದಿಂದ ಹಾರುವ ವೇಳೆ ಪ್ಯಾರಾಚೂಟ್ ತೆರೆದುಕೊಳ್ಳದೆ ತಾಂತ್ರಿಕ ದೋಷ ಉಂಟಾಗಿದ್ದರಿಂದ ಅವರು ನೆಲಕ್ಕೆ ಬಿದ್ದು ಸಾವು ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅಸು ನೀಗಿದ್ದಾರೆ.
ಆಗ್ರಾ ಏರ್‌ಬೇಸ್‌ನಲ್ಲಿ ಈ ದುರಂತ ಸಂಭವಿಸಿದೆ. ತಿವಾರಿ ಯೋಧರಿಗೆ ಪ್ಯಾರಾ ಟ್ರೂಪಿಂಗ್ ತರಬೇತಿ ನೀಡುತ್ತಿದ್ದರು. ಆದರೆ ಪ್ಯಾರಾಚೂಟ್ ತೆರೆದುಕೊಳ್ಳದೇ ನೆಲಕ್ಕೆ ಬಿದ್ದಿದ್ದಾರೆ. ಕೂಡಲೇ ಜೊತೆಗಿದ್ದ ಅಧಿಕಾರಿಗಳು ಹಾಗೂ ಟ್ರೈನಿಗಳು ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ. ಐಎಎಫ್ ತಿವಾರಿ ನಿಧನಕ್ಕೆ ಸಂತಾಪ ಸೂಚಿಸಿದೆ ಮತ್ತು ಈ ದುಃಖದ ಸಮಯದಲ್ಲಿ ಅವರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುವುದಾಗಿ ಹೇಳಿದೆ. ಬುಧವಾರ ನಡೆದ ಜಗ್ವಾರ್ ದುರಂತದಲ್ಲಿ ಮಡಿದ ಫ್ಲೈಟ್ ಲೆಫ್ಟಿನೆಂಟ್ ಸಿದ್ಧಾರ್ಥ್ ಯಾದವ್ ಹರ್ಯಾಣದ ರೇವಾರಿಯವರು. ಜಾಗ್ವಾರ್ ಜೆಟ್ ವಿಮಾನ್ ಜಾಮ್‌ನಗರದಲ್ಲಿ ಅಪಘಾತಕ್ಕೀಗಿ ಅಸು ನೀಗಿದ್ದರು. 28ರ ಹರೆಯದ ಸಿದ್ಧಾರ್ಥ್‌ಗೆ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿದ್ದು, ನವೆಂಬರ್‌ನಲ್ಲಿ ಮದುವೆ ನಡೆಯಬೇಕಿತ್ತು.