Menu

Ahmedabad Air Crash: ಮೃತರಲ್ಲಿ 80 ಮಂದಿಯ ಗುರುತು ಡಿಎನ್‌ಎಯಿಂದ ಪತ್ತೆ

ಅಹಮದಾಬಾದ್‌ನಲ್ಲಿ ಗುರುವಾರ ನಡೆದ ಏರ್ ಇಂಡಿಯಾ ವಿಮಾನ ಪತನದಲ್ಲಿ ಮೃತಪಟ್ಟವರ ಡಿಎನ್‌ಎ ಪರೀಕ್ಷೆ ನಡೆಯುತ್ತಿದ್ದು, ಈವರೆಗೆ 80 ಜನರ ಡಿಎನ್‌ಎ ಮ್ಯಾಚ್ ಆಗಿದೆ. 33 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಇಲ್ಲಿನ ಸಿವಿಲ್ ಆಸ್ಪತ್ರೆಯ ಹೆಚ್ಚುವರಿ ಸೂಪರಿಂಟೆಂಡೆಂಟ್ ಡಾ. ರಜನೀಶ್ ಪಟೇಲ್ ಮಾಹಿತಿ ನೀಡಿದ್ದಾರೆ.

ಅಹಮದಾಬಾದ್‌ನ 12 ಮಂದಿ, ಬರೋಡಾದ ಐದು ಮಂದಿ, ಮೆಹ್ಸಾನಾದ ನಾಲ್ಕು ಮಂದಿ, ಆನಂದ್‌ನ ನಾಲ್ಕು ಮಂದಿ, ಖೇಡಾ, ಭರೂಚ್‌ನ ತಲಾ ಇಬ್ಬರು, ಉದಯಪುರ, ಜೋಧ್‌ಪುರ ಬೋಟಾಡ್‌ನ ತಲಾ ಒಬ್ಬರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಗುಜರಾತ್‌ನ ಮಾಜಿ ಸಿಎಂ ವಿಜಯ್ ರೂಪಾನಿ ಅವರ ಮೃತದೇಹದ ಗುರುತು ಭಾನುವಾರ ಬೆಳಗ್ಗೆ 11:10ಕ್ಕೆ ಬಂದ ಡಿಎನ್‌ಎ ವರದಿಯಲ್ಲಿ ಪತ್ತೆಯಾಗಿತ್ತು. ರೂಪಾನಿ ಅವರ ಸಹೋದರಿಯಿಂದ ಸ್ಯಾಂಪಲ್ ಪಡೆದು ಡಿಎನ್‌ಎ ಪರೀಕ್ಷೆ ಮಾಡಲಾಗಿತ್ತು.

ಇಂದು ರಾಜ್‌ಕೋಟ್‌ನಲ್ಲಿ ವಿಜಯ್ ರೂಪಾನಿ ಅಂತ್ಯಕ್ರಿಯೆ ನಡೆಯಲಿದೆ. ದುರಂತದಲ್ಲಿ ಮೃತಪಟ್ಟವರ ಡಿಎನ್‌ಎ ಮ್ಯಾಚ್ ಮಾಡುವ ಕಾರ್ಯ ಮುಂದುವರಿದಿದೆ.

Related Posts

Leave a Reply

Your email address will not be published. Required fields are marked *