Menu

ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಅಂಗೀಕಾರ

ಲೋಕಸಭೆಯಲ್ಲಿ ಬುಧವಾರ ಮಧ್ಯರಾತ್ರಿ ಸುದೀರ್ಘ ಚರ್ಚೆಯ ಬಳಿಕ ವಕ್ಫ್‌ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದೆ. ವಿವಾದಿತ ಮಸೂದೆ ಕುರಿತು ಸಂಸತ್‌ನಲ್ಲಿ 12 ಗಂಟೆ  ಚರ್ಚೆ ನಡೆಯಿತು. ನಂತರ 2 ಗಂಟೆ ಮತದಾನ ನಡೆಯಿತು. ಮಧ್ಯರಾತ್ರಿ 2 ಗಂಟೆಗೆ ಮಸೂದೆಗೆ ಸದನ  ಸಮ್ಮತಿಸಿದೆ.

ಮಸೂದೆ ಪರ 288 ಹಾಗೂ ಮಸೂದೆ ವಿರುದ್ಧ 232 ಮತಗಳು ಬಂದಿವೆ. ಮಸೂದೆಯನ್ನು ಮತಕ್ಕೆ ಹಾಕುವ ಮುನ್ನ ದಿನವಿಡೀ ಚರ್ಚೆ ನಡೆಯಿತು. ಮಸೂದೆ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ಸಮರ ನಡೆದಿದೆ. ಮುಸ್ಲಿಮರ ಹಕ್ಕು ಕಸಿಯುವ ಯತ್ನ ಎಂದು ವಿಪಕ್ಷಗಳು ಮಸೂದೆಗೆ ವಿರೋಧ ವ್ಯಕ್ತಪಡಿಸಿದವು. ಮಸೂದೆ ಯಾವುದೇ ಧರ್ಮದ ವಿರೋಧಿಯಲ್ಲ ಎಂದು ಆಡಳಿತ ಪಕ್ಷವು ಸಮರ್ಥಿಸಿಕೊಂಡಿತು.

ಲೋಕಸಭೆಯಲ್ಲಿ ಅಂಗೀಕಾರಗೊಂಡ ಮಸೂದೆ ಇಂದು (ಗುರುವಾರ) ರಾಜ್ಯಸಭೆಯಲ್ಲೂ ಮಂಡನೆಯಾಗಲಿದೆ. ಇಲ್ಲೂ ಸುದೀರ್ಘ ಚರ್ಚೆ ಬಳಿಕ ಮತದಾನ ನಡೆಯಲಿದೆ. ರಾಜ್ಯಸಭೆಯಲ್ಲೂ ಮಸೂದೆ ಅಂಗೀಕಾರಗೊಂಡರೆ ರಾಷ್ಟ್ರಪತಿಗಳ ಸಹಿಗೆ ಹೋಗಲಿದೆ. ರಾಷ್ಟ್ರಪತಿಗಳು ಸಹಿ ಮಾಡಿದಾಗ ಮಸೂದೆ ಕಾನೂನಾ ಗಲಿದೆ. 236 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಹುಮತಕ್ಕೆ 119 ಮತಗಳು ಬೇಕು. ಎನ್‌ಡಿಎ 125 ಸದಸ್ಯರನ್ನು ಹೊಂದಿದೆ. ಹೀಗಾಗಿ ಅಲ್ಲಿಯೂ ಮಸೂದೆ ಅಂಗೀಕಾರವಾಗುವ ಸಾಧ್ಯತೆ ದಟ್ಟವಿದೆ.

Related Posts

Leave a Reply

Your email address will not be published. Required fields are marked *