Menu

ನಟಿ ರನ್ಯಾ ರಾವ್ ಗೆ ವಿಚ್ಛೇದನ ಕೋರಿ‌ ಪತಿ ಜತಿನ್ ಕೋರ್ಟ್ ಗೆ ಅರ್ಜಿ

ranya rao husband

ಬೆಂಗಳೂರು:ಅಕ್ರಮ ಚಿನ್ನ ಸಾಗಾಣೆ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಡಿಜಿಪಿ ಮಲಮಗಳು ನಟಿ ರನ್ಯಾ ರಾವ್ ರಿಂದ ವಿಚ್ಛೇದನ ಕೋರಿ‌ ಕೋರ್ಟ್​ಗೆ ಅರ್ಜಿ ಸಲ್ಲಿಸಲು ಪತಿ ಜತಿನ್ ಹುಕ್ಕೇರಿ ಮುಂದಾಗಿದ್ದಾರೆ.

ಮದುವೆಯಾದಾಗಿನಿಂದ ರನ್ಯಾ ಜೊತೆಗೆ ಒಂದಲ್ಲ ಒಂದು ತೊಂದರೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಆಕೆಯಿಂದ ಪತಿ ಜತಿನ್ ಅಂತರ ಕಾಯ್ದುಕೊಂಡಿದ್ದಾರೆ.

ಕಳೆದ 2024 ಅಕ್ಟೋಬರ್ 6 ರಂದು ಬಾಸ್ಟಿನ್ ರೆಸ್ಟೋರೆಂಟ್​ನಲ್ಲಿ ರನ್ಯಾ, ಜತಿನ್​ ಇಬ್ಬರೂ ಮದುವೆ ಬ್ರೋಕರ್ ಮೂಲಕ ಭೇಟಿಯಾಗಿ 2024 ಅಕ್ಟೋಬರ್ 23ರಂದು ನಿಶ್ಚಿತಾರ್ಥ ಮಾಡಿಕೊಂಡು 2024 ನವೆಂಬರ್ 27 ರಂದು ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ಮದುವೆ ಮಾಡಿಕೊಂಡಿದ್ದರು. ಬಳಿಕ ಲ್ಯಾವೆಲ್ಲೆ ರಸ್ತೆಯ ಅಪಾರ್ಟ್ ಮೆಂಟ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.

ಮದುವೆಯಾದ ಒಂದೇ ತಿಂಗಳಿಗೆ ರನ್ಯಾ, ಜತಿನ್ ನಡುವೆ ಮನಸ್ತಾಪ ಶುರುವಾಗಿದ್ದು, ಸಂಬಂಧದಲ್ಲಿ ಪಾರದರ್ಶಕತೆ ಇಲ್ಲ, ಮಾತುಕತೆಯೂ ಇರಲಿಲ್ಲವೆಂದು ಪತಿ ಜತಿನ್ ಹುಕ್ಕೇರಿ ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಸಂಬಂಧಿಕರು ಸಂಧಾನಕ್ಕೆ ಪದೇ ಪದೇ ಯತ್ನಿಸಿದರೂ ಸಂಬಂಧ ಸರಿಹೋಗಿರಲಿಲ್ಲ.

ಪತಿಯ ಮಾತಿಗೆ ಕ್ಯಾರೆ ಎನ್ನದ ರನ್ಯಾ

ಮದುವೆಯಾದ ಎರಡೇ ತಿಂಗಳಿಗೆ ರನ್ಯಾ ದುಬೈಗೆ ಓಡಾಟ ನಡೆಸಿದ್ದರು. ಪದೇ ಪದೆ ರನ್ಯಾ ದುಬೈ ಪ್ರವಾಸಕ್ಕೆ ಹೋಗುತ್ತಿದ್ದು, ಪತಿಗೆ ಅನುಮಾನ ಬಂದು ಜಗಳವಾಗಿದೆ. ಈ ಜಗಳ ಡಿವೋರ್ಸ್ ಹಂತಕ್ಕೂ ತಲುಪಿತ್ತು. ಗಂಡನ ಜೊತೆ ಜಗಳವಾಡಿದರೂ ಕ್ಯಾರೆ ಎನ್ನದ ರನ್ಯಾ, ತನ್ನ ಫ್ರೆಂಡ್ ಆಗಿದ್ದ ತರುಣ್ ಜೊತೆ ಸೇರಿ ಚಿನ್ನಾ ಸಾಗಾಟಕ್ಕೆ ಇಳಿದಿದ್ದರು. ದುಬೈನಿಂದ ಬೆಂಗಳೂರಿಗೆ ಗೋಲ್ಡ್​ ತರಿಸುತ್ತಿದ್ದೇ ತರುಣ್ ಎನ್ನುವುದು ಡಿಆರ್​ಐ ತನಿಖೆಯಲ್ಲಿ ಗೊತ್ತಾಗಿತ್ತು.

ಇನ್ನು ರನ್ಯಾರಾವ್ ಬಂಧನದ ಬಳಿಕ ಪತಿ ಜತೀನ್ ಹುಕ್ಕೇರಿಯನ್ನೂ ಡಿಆರ್​ಐ ಅಧಿಕಾರಿಗಳು ವಿಚಾರಣೆ ಮಾಡಿದ್ದರು. ಇದರಿಂದ ಬಂಧನ ಭೀತಿಗೆ ಒಳಗಾಗಿದ್ದ ಜತೀನ್ ಹೈಕೋರ್ಟ್ ಮೆಟ್ಟಲೇರಿದ್ದರು.

ಜತಿನ್ ಹುಕ್ಕೇರಿ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದರು. ಪತ್ನಿಯ ಮೇಲಿನ ಆರೋಪಕ್ಕೂ ಜತಿನ್​ಗೂ ಸಂಬಂಧವಿಲ್ಲ. ಮದುವೆಯಾದ ಒಂದೇ ತಿಂಗಳಿಗೆ ಇಬ್ಬರ ನಡುವೆ ಮನಸ್ತಾಪ ಇತ್ತು ಅಂತಾ ವಾದ ಮಾಡಿದ್ದರು. ಬಳಿಕ ಕೋರ್ಟ್ ಕಾನೂನು ಪ್ರಕ್ರಿಯೆಯಿಲ್ಲದೇ ಬಂಧಿಸುವಂತಿಲ್ಲವೆಂದು ಆದೇಶ ನೀಡಿತ್ತು.

Related Posts

Leave a Reply

Your email address will not be published. Required fields are marked *