ಬಾಲಿವುಡ್ ಸಿನಿಮಾ ಹಾಗೂ ಕಿರುತೆರೆಗಳಲ್ಲಿ ಜನಪ್ರಿಯರಾಗಿದ್ದ ಹಿರಿಯ ನಟ ಸತೀಶ್ ಶಾ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಹಾಸ್ಯ ಪ್ರಧಾನ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಸತೀಶ್ ಶಾ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಬೆಳಿಗ್ಗೆ ಅವರ ಆರೋಗ್ಯ ದಿಢೀರನೆ ಹದಗೆಟ್ಟಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಶನಿವಾರ ಮಧ್ಯಾಹ್ನ 2.30ರ ಸುಮಾರಿಗೆ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
1951 ಜೂನ್ 25ರಂದು ಮುಂಬೈನಲ್ಲಿ ಜನಿಸಿದ್ದ ಸತೀಶ್ ಶಾ ಗುಜರಾತಿ ಕುಟ್ಚಿ ಸಮುದಾಯಕ್ಕೆ ಸೇರಿದವರಾಗಿದ್ದು, 1978ರಲ್ಲಿ ಅಜೀಬ್ ದಾಸ್ತಾನ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿರಿಸಿದರು.
ಹಮ್ ಸಾಥ್ ಸಾಥ್ ಹೇ, ಕಲ್ ಹೋ ನಾ ಹೋ, ಮುಜ್ಸೆ ಶಾದಿ ಕರೋಗೆ , ಓಂ ಶಾಂತಿ ಓಂ ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದರು. 1984ರಲ್ಲಿ ಯೆ ಜೋ ಹೆ ಜಿಂದಗಿ ಧಾರವಾಹಿ ಮೂಲಕ ಜನಪ್ರಿಯರಾದರು. ನಂತರ ಫಿಲ್ಮಿ ಚಕ್ಕರ್, ಸಾರಾಭಾಯಿ/ ಸಾರಾಭಾಯಿ, ಭಾರೀ ಜನಪ್ರಿಯತೆ ತಂದುಕೊಟ್ಟಿತ್ತು.


