Menu

ನಟ ಕಮಲ್ ಹಾಸನ್‌ಗೆ ಆಸ್ಕರ್ ಸದಸ್ಯತ್ವದ ಗರಿ

kamal hassan

ನಟ ಕಮಲ್ ಹಾಸನ್ ಅವರಿಗೆ ಪ್ರತಿಷ್ಠಿತ ಆಸ್ಕರ್ ಸದಸ್ಯತ್ವ ಸಿಕ್ಕಿದೆ. ಇದನ್ನು ಖುಷಿಯಿಂದ ಸ್ವೀಕರಿಸಿರುವುದಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಆಸ್ಕರ್‌ ಪ್ರಶಸ್ತಿಗಾಗಿ ಸಿನಿಮಾ ಆಯ್ಕೆ ಮಾಡುವಾಗ ಜಾಗತಿಕ ಸಿನಿಮಾ ರಂಗದ ಹಲವರು ವೋಟ್ ಮಾಡುತ್ತಾರೆ. ವೋಟ್ ಮಾಡುವವರು ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್​ ಆ್ಯಂಡ್ ಸೈನ್ಸ್’ (ಆಸ್ಕರ್‌)ನಲ್ಲಿ ಸದಸ್ಯರಾಗಿರಬೇಕು. ಕಮಲ್ ಹಾಸನ್ ಅವರಿಗೆ ಈ ಸದಸ್ಯತ್ವಕ್ಕೆ ಆಹ್ವಾನ ಸಿಕ್ಕಿದ್ದು, ಅವರು ಸ್ವೀಕರಿಸಿದ್ದಾರೆ.

ಈ ಗೌರವ ಕೇವಲ ನನ್ನದಲ್ಲ. ಇಡೀ ಭಾರತೀಯ ಸಿನಿಮಾ ಸಮೂಹಕ್ಕೆ ಸೇರುತ್ತದೆ. ಹಲವು ನಿರ್ದೇಶಕರಿಗೆ ಸಲ್ಲುತ್ತದೆ ಎಂದು ಕಮಲ್ ಹಾಸನ್ ಹೇಳಿದ್ದಾರೆ. ಭಾರತೀಯ ಚಿತ್ರರಂಗ ಜಗತ್ತಿಗೆ ಇನ್ನೂ ಸಾಕಷ್ಟನ್ನು ನೀಡಬೇಕಿದೆ. ನನ್ನ ಜೊತೆ ಅಕಾಡೆಮಿ ಸೇರುತ್ತಿರುವ ಕಲಾವಿದರು ಮತ್ತು ತಂತ್ರಜ್ಞರಿಗೂ ಅಭಿನಂದನೆ ಎಂದು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆಯುಷ್ಮಾನ್ ಖುರಾನಾ, ಡಿಂಪಲ್ ಕಪಾಡಿಯಾ ಮತ್ತಿತರರಿಗೆ ಆಸ್ಕರ್‌ ಸದಸ್ಯತ್ವಕ್ಕೆ ಆಹ್ವಾನ ಬಂದಿದೆ.

Related Posts

Leave a Reply

Your email address will not be published. Required fields are marked *