Wednesday, December 10, 2025
Menu

ಸರ್ಜರಿ ಮಾಡಿಸಿಕೊಳ್ಳಲಿದ್ದಾರ ನಟ ದರ್ಶನ್‌

Actor Darshan

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನ ಆರೋಪಿಯಾಗಿ ಜೈಲು ಸೇರಿದ್ದ ದರ್ಶನ್ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲೆಂದು ಜಾಮೀನು ಪಡೆದು ಹೊರ ಬಂದು ಫಿಸಿಯೊ ಥೆರಪಿ ಪಡೆದುಕೊಂಡಿದ್ದಾರೆ. ಆದರೆ ಬೆನ್ನು ನೋವು ವಾಸಿಯಾಗುವ ಲಕ್ಷಣ ಕಾಣುತ್ತಿಲ್ಲವಾದ್ದರಿಂದ ಆಪರೇಷನ್ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಸಂಕ್ರಾತಿ ವೇಳೆಗೆ ದರ್ಶನ್ ಮೈಸೂರಿನಲ್ಲಿಯೇ ಆಪರೇಷನ್ ನಡೆಯುವ ಸಾಧ್ಯತೆ ಇದೆ, ವೈದ್ಯ ಅಜಯ್ ಹೆಗಡೆ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗಿದೆ.

ದರ್ಶನ್ ಅವರಿಗೆ ಜೈಲಿನಲ್ಲಿ ಕೂರಲು, ಮಲಗಲು ಬೇಕಾದ ವ್ಯವಸ್ಥೆ ಇಲ್ಲದ ಕಾರಣ ಬೆನ್ನು ನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆಗೆಂದು ಮಧ್ಯಂತರ ಜಾಮೀನು ಪಡೆದರು. ಇಷ್ಟು ದಿನ ಫಿಸಿಯೋ ಥೆರಪಿ ಪಡೆದರೂ ನೋವು ಶಮನವಾಗದ ಕಾರಣ ಆಪರೇಷನ್ ಮಾಡಿಸಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಆಪರೇಷನ್ ನಡೆದು ಒಂದುವರೆ ತಿಂಗಳವರೆಗೂ ಫೈಟ್ ದೃಶ್ಯದಲ್ಲಿ ದರ್ಶನ್ ಭಾಗಿಯಾಗುವಂತಿಲ್ಲ. ಸಿನಿಮಾದ ಸಾಮಾನ್ಯ ದೃಶ್ಯಗಳ ಶೂಟ್​ನಲ್ಲಿ ಭಾಗಿ ಆಗಬಹುದು. ಫೆಬ್ರವರಿಯಲ್ಲಿ ದರ್ಶನ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

‘ಡೆವಿಲ್’ ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಚಿತ್ರದ ಒಂದಷ್ಟು ಶೂಟಿಂಗ್ ಲೇ ಪೂರ್ಣಗೊಂಡಿದೆ. ಉಳಿದು ಶೂಟಿಂಗ್​ನ ಪೂರ್ತಿಗೊಳಿಸಿ ಈ ವರ್ಷವೇ ಸಿನಿಮಾ ರಿಲೀಸ್ ಮಾಡಲು ತಂಡ ಚಿಂತನೆ ನಡೆಸಿದೆ.

Related Posts

Leave a Reply

Your email address will not be published. Required fields are marked *