Menu

ಬೆಂಗಳೂರು ಯುವತಿ ಜೊತೆ ಆಮೀರ್‌ಖಾನ್‌ ಮೂರನೇ ಮದುವೆಯಂತೆ

ನಟ ಆಮೀರ್ ಖಾನ್ ಬೆಂಗಳೂರಿನ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಅವರಿಬ್ಬರ ಮದುವೆ ನಡೆಯಲಿದೆ ಎಂದು ಬಾಲಿವುಡ್ ವಲಯದಲ್ಲಿ ಸುದ್ದಿಗಳು ಹರಿದಾಡುತ್ತಿವೆ.

ಆದರೆ ಆಮೀರ್ ಖಾನ್ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅಭಿಮಾನಿಗಳು 60 ನೇ ವಯಸ್ಸಿನಲ್ಲಿ ಮೂರನೇ ಮದುವೆಯೇ ಎಂದು ಆಶ್ಚರ್ಯದಿಂದ ಪ್ರಶ್ನಿಸುತ್ತಿದ್ದಾರೆ.

ಆಮೀರ್‌ ಖಾನ್‌ 1986 ರಲ್ಲಿ ರೀನಾ ದತ್ತಾ ಅವರನ್ನು ವಿವಾಹವಾದರು. ಈ ದಂಪತಿಗೆ ಜುನೈದ್ ಖಾನ್ ಎಂಬ ಮಗ ಮತ್ತು ಐರಾ ಎಂಬ ಮಗಳು ಇದ್ದಾರೆ. ಜುನೈದ್ ಖಾನ್ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಐರಾ ಮದುವೆ ಕಳೆದ ವರ್ಷ ನಡೆಯಿತು. ಆಮೀರ್ ಖಾನ್ ರೀನಾ ದತ್ತಾಗೆ 2002 ರಲ್ಲಿ ವಿಚ್ಛೇದನ ನೀಡಿ, ಬಳಿಕ ಕಿರಣ್ ರಾವ್ ಅವರನ್ನು ವಿವಾಹವಾದರು. ಈ ದಂಪತಿಗೆ ಆಜಾದ್ ಎಂಬ ಮಗನಿದ್ದಾನೆ. ಈ ಮದುವೆಯೂ 2021 ರಲ್ಲಿ ವಿಚ್ಛೇದನದಲ್ಲಿ ಕೊನೆಗೊಂಡಿತು.

ನಂತರದ ಬೆಳವಣಿಗೆಯಲ್ಲಿ  ಆಮೀರ್‌ ಖಾನ್‌ ಅವಕಾಶ ಸಿಕ್ಕರೆ ಆಮಿರ್ ಸ್ನಾನ ಮಾಡದೆಯೇ ಇದ್ದುಬಿಡುತ್ತಾನೆ ಎಂದಿದ್ದರು ಕಿರಣ್ ರಾವ್. ನಾನು ಕ್ಲೀನಾಗೇ ಇರ್ತೀನಿ, ಸ್ನಾನ ಮಾಡೋಕೆ ಇಷ್ಟ ಇಲ್ಲ ಎಂದು ಆಮೀರ್‌ ಕೂಡ ಒಪ್ಪಿದ್ದರು.  ದಿನಗಟ್ಟಲೆ ಸ್ನಾನವೇ ಮಾಡದ ಗಂಡನ ಜೊತೆ ಕಿರಣ್ ಇಷ್ಟು ವರ್ಷ ಹೇಗೆ ಸಂಸಾರ ಮಾಡಿದ್ದರೋ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿತ್ತು. ಡಯೆಟ್​ನಲ್ಲಿದ್ದರೆ ಆತ ಬಹುತೇಕ ಏನನ್ನೂ ತಿನ್ನೋದೇ ಇಲ್ಲ, ಡಯೆಟ್ ಮಾಡ್ತಿಲ್ಲ ಎಂದರೆ ಸಿಕ್ಕ ಸಿಕ್ಕದ್ದನ್ನೆಲ್ಲಾ ತಿನ್ನುವ ಕಾಯಿಲೆ ಇದೆ ಎಂದು ಕಿರಣ್‌ ರಾವ್‌ ಹೇಳಿದ್ದ ವೀಡಿಯೊ ತುಣುಕುಗಳು ಸದ್ದು ಮಾಡಿದ್ದವು.
ಯಿಲೆ ಇದೆ ಎಂದಿದ್ದರು  ಕಿರಣ್ ರಾವ್.

ಈಗ ಆಮೀರ್ ಖಾನ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಅಭಿಮಾನಿಗಳು  ಮಾತ್ರ  ಆಮೀರ್‌ ಮೂರನೇ ಬಾರಿಗೆ ಮದುವೆಯಾಗುತ್ತಿರುವ  ಆ ಹುಡುಗಿ ಯಾರು, ಮದುವೆ ಆಗುತ್ತಿರುವುದು ನಿಜವೇ ಎಂಬುದನ್ನು ಆಮೀರ್‌ ಬಾಯಿಯಿಂದಲೇ ಕೇಳಬೇಕೆಂಬ ಕಾತುರದಲ್ಲಿದ್ದಾರೆ.

Related Posts

Leave a Reply

Your email address will not be published. Required fields are marked *