Menu

ರಾಜ್ಯಪಾಲರ ವಿರುದ್ದ ಕ್ರಮ ಖಂಡನೀಯ, ಬಿಕೆ ಹರಿಪ್ರಸಾದ್ ವಿರುದ್ದ ಕ್ರಮ ಜರುಗಿಸಿ : ಬೊಮ್ಮಾಯಿ

ರಾಜ್ಯ ಸರ್ಕಾರ ಕೇವಲ ರಾಜಕಾರಣಕ್ಕಾಗಿ ಮತ್ತು ತಮ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ವಿರುದ್ದ ಆರೋಪ ಮಾಡುತ್ತಿರುವುದು ರಾಜ್ಯಪಾಲರಿಗೆ ತೋರಿರುವ ಅಗೌರವ. ಅದು ಸಂವಿಧಾನಕ್ಕೆ ಮಾಡಿರುವ ಅಪಚಾರ. ಅವರ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತಿರುವುದು ಅತ್ಯಂತ ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಎಕ್ಸ್ ಮಾಡಿರುವ ಅವರು, ಹಿಂದಿನ ರಾಜ್ಯಪಾಲರು ಮೊದಲ ಪುಟ ಕೊನೆ ಪುಟ ಓದದೆ ಇರುವ ಅನೇಕ ಉದಾಹರಣೆಗಳಿವೆ. ರಾಜ್ಯಪಾಲರ ವಿರುದ್ದ ಅವಾಚ್ಯ ಶಬ್ದ ಬಳಕೆ ಮಾಡಿರುವುದು ಸಂವಿಧಾನಕ್ಕೆ ಹಾಗೂ ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರಿಗೆ ಮಾಡಿರುವ ಅವಮಾನ. ಅವರ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತಿರುವುದು ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ.

ಅತ್ಯಂತ ಹಿರಿಯ ಶಾಸಕರಾದ ಬಿ.ಕೆ. ಹರಿಪ್ರಸಾದ ಅವರ ವರ್ತನೆ ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನು ತೋರಿಸುತ್ತದೆ. ಅವರ ವಿರುದ್ದ ಕ್ರಮ ಜರುಗಿರಸುವುದು ಅತ್ಯಂತ ಅವಶ್ಯಕತೆ ಇದೆ. ಈ ಹಿಂದೆ ಹಂಸರಾಜ ಭಾರದ್ವಾಜ್ ಅವರು ರಾಜ್ಯಪಾಲ ರಾಗಿದ್ದಾಗ ಹಲವಾರು ವಿಚಾರಗಳಲ್ಲಿ ತಮ್ಮ ಮಿತಿ ಮೀರಿ, ಕಾನೂನು ಮೀರಿ ವರ್ತನೆ ಮಾಡಿರುವ ಉದಾಹರಣೆ ಸಾಕಷ್ಟು ಇವೆ. ರಾಜಭವನ ಕಾಂಗ್ರೆಸ್ ಭವನ ಆಗಿದ್ದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮರೆತರೆ ಎಂದು ಪ್ರಶ್ನಿಸಿದ್ದಾರೆ.

37 ಸಕೆಂಡ್‌ಗಳಲ್ಲಿ ರಾಜ್ಯಪಾಲರು ಎಸಗಿದ ಅಪಚಾರ ಒಂದೆರಡಲ್ಲ, ರಾಷ್ಟ್ರಗೀತೆಗೆ ಅಪಚಾರ, ಸಂವಿಧಾನಕ್ಕೆ ದ್ರೋಹ, ಕರ್ನಾಟಕಕ್ಕೆ ಅಗೌರವ, ಕನ್ನಡಿಗರಿಗೆ ಅಪಮಾನ, ರಾಜ್ಯ ಸರ್ಕಾರಕ್ಕೆ ಅವಮಾನ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿ ಕಾರಿದ್ದು, ರಾಜ್ಯಪಾಲರಿಂದ ಇಷ್ಟೆಲ್ಲ ಅಪಚಾರವಾದರೂ ಬಿಜೆಪಿಯವರ ಸಮರ್ಥನೆ ನೋಡುತ್ತಿದ್ದರೆ ರಾಜ್ಯಪಾಲರ ರಿಮೋಟ್ ಕಂಟ್ರೋಲ್ ಕೇಶವ ಕೃಪಾದಲ್ಲಿದೆಯೇ ಅಥವಾ ಜಗನ್ನಾಥ ಭವನದಲ್ಲಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದ್ದಾರೆ.

ಪಕ್ಷದ ಶಾಸಕರು ಬೀದಿ ರೌಡಿಗಳಂತೆ ವರ್ತಿಸಿ ಸಂವಿಧಾನಕ್ಕೆ, ರಾಜ್ಯಪಾಲರಿಗೆ, ಸದನಕ್ಕೆ ಅಗೌರವ ತೋರಿದ್ದಾರೆ. ಸದನದ ಸಂಪ್ರದಾಯ ಹಾಗೂ ನಿಯಮಾವಳಿಗಳನ್ನ ಗಾಳಿಗೆ ತೂರಿ ರಾಜ್ಯಪಾಲರ ಭಾಷಣಕ್ಕೆ ಮೂಲಕ ಅಡ್ಡಿ ಪಡಿಸುವ ಮೂಲಕ ಸದನಕ್ಕೆ ಅಪಮಾನ ಎಸಗಿದ್ದಾರೆ. ಕರ್ನಾಟಕದ ವಿಧಾನಮಂಡಲದ ಇತಿಹಾಸದಲ್ಲಿ ಇಂದು ಅತ್ಯಂತ ಕರಾಳ ದಿನ ಎಂದು ಪ್ರತಿಪಕ್ಷ ನಾಯಕ  ಆರ್‌. ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Posts

Leave a Reply

Your email address will not be published. Required fields are marked *