ಪ್ರಿಯತಮೆಯೊಂದಿಗೆ ಅಕ್ರಮ ಸಂಬಂಧವೇ ತನ್ನ ಪತ್ನಿಯ ಆತ್ಮತ್ಯೆಗೆ ಕಾರಣ ಎಂದು ಟೆಕ್ಕಿ ಬಶೀರ್ ಉಲ್ಲಾ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ತನ್ನ ಪತಿ ಅಕ್ರಮ ಸಂಬಂಧ ಹೊಂದಿರುವುದಾಗಿ ಆರೋಪಿಸಿ ಗೃಹಿಣಿ ಬಾಹರ್ ಅಸ್ಮಾ ಇತ್ತೀಚೆಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಪೋಷಕರು ಪತಿ ಬಶೀರ್ ಉಲ್ಲಾ ಮಗಳನ್ನ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾನೆಂದು ಆರೋಪಿಸಿದ್ದರು.
ಪೊಲೀಸರು ಬಶೀರ್ ಉಲ್ಲಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅಸ್ಮಾ ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದ ಆರೋಪದ ಮೇಲೆ ಬಶೀರ್ ಉಲ್ಲಾನನ್ನ ವಿಚಾರಣೆ ಮಾಡಿದಾಗ ಮಾಜಿ ಪ್ರಿಯತಮೆಯೊಂದಿಗೆ ಅಕ್ರಮ ಸಂಬಂಧ ಇದ್ದ ಬಗ್ಗೆ ಪೊಲೀಸರ ಮುಂದೆ ಒಪ್ಪಿ ಕೊಂಡಿದ್ದಾನೆ. ನನಗೆ ಅಕ್ರಮ ಸಂಬಂಧ ಇತ್ತು. ಅದನ್ನು ಅವಳಿಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಹಾಗಾಗಿ ನನ್ನ ಜೊತೆ ಗಲಾಟೆ ಮಾಡುತ್ತಿದ್ದಳು. ಆಕೆಯ ಗಲಾಟೆಗೆ ನಾನು ಕೇರ್ ಮಾಡದೇ ಇದ್ದುದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.
ಆರೋಪಿ ಬಶೀರ್‌ಗೆ ಕಾಲೇಜು ದಿನಗಳಲ್ಲಿದ್ದ ಪ್ರಿಯತಮೆಗೆ ಮದುವೆ ಆಗಿದ ಬಳಿಕ ಸಂಪರ್ಕ ತಪ್ಪಿ ಹೋಗಿತ್ತು. ಆರೋಪಿಯು ಮದುವೆ ಆದ ಬಳಿಕ ಮಾಜಿ ಪ್ರಿಯತಮೆ ಸಂಪರ್ಕಕ್ಕೆ ಸಿಕ್ಕಿದ್ದಳು. ಅಂದಿನಿಂದ ಹೆಂಡತಿಯನ್ನು ಕಡೆಗಣಿಸಿ ಆಕೆಯ ಜೊತೆ ಸಂಬಂಧ ಬೆಳೆಸಿಕೊಂಡಿದ್ದ ಎಂದು ತಿಳಿದುಬಂದಿದೆ.