ಬೆಂಗಳೂರಿನ ಮೈಸೂರು ರೋಡ್ ಫ್ಲೈಓವರ್‌ನಲ್ಲಿ ಓವರ್‌ಟೇಕ್ ಮಾಡಲು ಹೋಗಿ ಎರಡು ಬೈಕ್‌ಗಳು ಟಚ್ ಆಗಿ ಇಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಮೃತರನ್ನು ಆಕಾಶ್ ಮತ್ತು ಅಫ್ಜಲ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಣಿ ಮತ್ತು ಆಸಿಮ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಂಗಳೂರು ಮೂಲದವರಾದ ಆಸಿಮ್, ಅಫ್ಜಲ್ ವಿಜಯನಗರದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಡರಾತ್ರಿ ಊಟಕ್ಕೆಂದು ಹೊರಗೆ ಹೊರಟಿದ್ದರು. ಅದೇ ಸಮಯದಲ್ಲಿ ಕೆಪಿ ಅಗ್ರಹಾರ ನಿವಾಸಿಗಳಾದ ಮೆಕಾನಿಕ್ ಕೆಲಸ ಮಾಡುತ್ತಿದ್ದ ಮಣಿ, ಆಕಾಶ್ ಹೊರಟಿದ್ದರು. ಓವರ್‌ಟೇಕ್ ಮಾಡಲು ಬೈಕ್ ಸವಾರರಿಬ್ಬರು ವೇಗವಾಗಿ ಓಡಿಸಿದ್ದಾರೆ. ಬೈಕ್‌ಗಳು ಪರಸ್ಪರ ಟಚ್ ಆಗಿ ರಸ್ತೆಗೆ ಬಿದ್ದ ರಭಸಕ್ಕೆ ಇಬ್ಬರು ಸ್ಥಳದಲ್ಲಿಯೇ ಅಸು ನೀಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಟಿ ಮಾರ್ಕೆಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.