ಅಮೃತ್‌ಸರ ಎಎಪಿ ನಾಯಕ ಜರ್ನೈಲ್ ಸಿಂಗ್ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಅತಿಥಿಗಳ ಸಮ್ಮುಖವೇ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಜರ್ನೈಲ್ ಸಿಂಗ್ ತರಣ್ ತರಣ್ ಜಿಲ್ಲೆಯ ವಲ್ಥೋವಾ ಗ್ರಾಮದ ನಿವಾಸಿ. ಅಮೃತಸರದಲ್ಲಿ ಮದುವೆಯೊಂದರಲ್ಲಿ ಭಾಗಿಯಾಗಿದ್ದಾಗ ದುಷ್ಕರ್ಮಿಗಳು ಸಮೀಪದಿಂದಲೇ ಗುಂಡು ಹಾರಿಸಿ ಕೊಲೆಗೈದಿದ್ದಾರೆ.
ಗುಂಡು ಜರ್ನೈಲ್ ಸಿಂಗ್ ಅವರ ಹಣೆ ಸೀಳಿದ್ದು ಕುಸಿದು ಬಿದ್ದಿದ್ದಾರೆ. ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಪ್ರಾಣ ಹೋಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸಿಸಿಟಿವಿ ಪರಿಶೀಲನೆ ಮಾಡಿದ್ದು, ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದಿದ್ದಾರೆ.
ಈ ಹತ್ಯೆಯ ಹೊಣೆಯನ್ನು ದೇವಿಂದರ್ ಬಂಬಿಹಾ ಗ್ಯಾಂಗ್ ಹೊತ್ತುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಇಂದು ಅಮೃತಸರದ ಮಾರಿಗೋಲ್ಡ್ ರೆಸಾರ್ಟ್‌ನಲ್ಲಿ ಜರ್ನೈಲ್ ಸರ್ಪಂಚ್ ಹತ್ಯೆ ಮಾಡಲಾಗಿದೆ. ಡೊನಿ ಬಾಲ್, ಪ್ರಭ್ ದಾಸುವಾಲ್, ಅಫ್ರಿದಿ ಟಟ್, ಮೊಹಬ್ಬತ್ ರಾಂಧವಾ, ಅಮರ್ ಖ್ವಾ ಮತ್ತು ಪವನ್ ಶಕೀನ್ ಇದರ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಅವರು ಪೊಲೀಸರಿಗೆ 35 ಲಕ್ಷ ರೂ. ನೀಡಿ ದಾಸುವಾಲ್‌ನಲ್ಲಿರುವ ನನ್ನ ಮನೆಯನ್ನು ಕೆಡವಲು ಹೋದ. ಹತ್ಯೆ ಈ ಕೆಲಸವನ್ನು ನಮ್ಮ ತಮ್ಮ ಗಂಗಾ ಠಾಕರ್‌ಪುರ್ ನಿರ್ವಹಿಸಿದರು. ಪೊಲೀಸರು ಯಾರಿಗೂ ಅಕ್ರಮವಾಗಿ ಕಿರುಕುಳ ನೀಡಬಾರದು. ನಾವೆಲ್ಲರೂ ಅವನ ಮೇಲೆ ಎರಡು ಬಾರಿ ದಾಳಿ ಮಾಡಿದೆವು, ಆದರೆ ಅವನು ತಪ್ಪಿಸಿಕೊಂಡು ನಮಗೆ ಯಾವುದೇ ಸಂಬಂಧವಿಲ್ಲದ ಅಕ್ರಮ ಮನೆಗಳಲ್ಲಿ ವಾಸಿಸುತ್ತಿದ್ದ ಹುಡುಗರ ಮೇಲೆ ಗುಂಡು ಹಾರಿಸಿದ ಎಂದು ಪೋಸ್‌ನಲ್ಲಿ ಬರೆಯಲಾಗಿದೆ.
ನಾವು ಈಗಾಗಲೇ ಈ ಬಗ್ಗೆ ಪೋಸ್ಟ್ ಮೂಲಕ ತಿಳಿಸಿದ್ದೆವು. ನಾವು ಕರೆ ಮಾಡಿ ವಿವರಿಸಲು ಪ್ರಯತ್ನಿಸಿದೆವು, ಆದರೆ ಅದು ಕೆಲಸ ಮಾಡಲಿಲ್ಲ. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ. ನಮ್ಮೊಂದಿಗೆ ಇರಿ ಎಂದು ಪೋಸ್ಟ್ ಮಾಡಿದ್ದಾರೆ.
ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ ಎಎಪಿ ನಾಯಕ ಜರ್ನೈಲ್ ಸಿಂಗ್ ಅವರ ಹತ್ಯೆಯನ್ನು ಖಂಡಿಸಿದ್ದಾರೆ. ಇದು ಅತ್ಯಂತ ಕಳವಳಕಾರಿ ಭಿಂದರ್ ಕಲಾನ್ (ಮೊಗಾ) ನಲ್ಲಿ ಯುವಕನ ಗುಂಡಿಕ್ಕಿ ಕೊಲ್ಲಲಾಯಿತು, ಕಪುರ್ತಲಾದಲ್ಲಿ ಮಹಿಳೆಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ಗೃಹ ಖಾತೆ ಹೊಂದಿರುವ ಮುಖ್ಯಮಂತ್ರಿ ಭಗವಂತ್ ಮಾನ್ ಅಧಿಕಾರದಲ್ಲಿ ಪೊಲೀಸ್ ವ್ಯವಸ್ಥೆಯ ಸಂಪೂರ್ಣ ವೈಫಲ್ಯ ಕಂಡಿದೆ. ಇದಕ್ಕೆಲ್ಲ ಮುಖ್ಯಮಂತ್ರಿ ಹೊಣೆ ಎಂದು ಹೇಳಿದ್ದಾರೆ. ಘಟನೆಯನ್ನು ಪಂಜಾಬ್ ಬಿಜೆಪಿ ಖಂಡಿಸಿದ್ದು, ಮುಖ್ಯಮಂತ್ರಿ ಭಾಗವಂತ್ ಮಾನ್ ಅವರ ರಾಜೀನಾಮೆಗೆ ಆಗ್ರಹಿಸಿದೆ.


