ಮುಂಬೈ ಬೀದಿಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ವಡಾ ಪಾವ್ ಮಾರಾಟ ಮಾಡುವ ಮೂಲಕ ನಟ ಅಮಿರ್ ಖಾನ್ ಚಿತ್ರದ ಪ್ರಚಾರ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ.
ಅಮೀರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ಅವರನ್ನೂ ಒಳಗೊಂಡ ಈ ವೀಡಿಯೊವನ್ನು ಸಿತಾರೆ ಜಮೀನ್ ಪರ್ ಚಿತ್ರದಲ್ಲಿ ಬಂಟು ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ವೇದಾಂತ್ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಸಿತಾರೆ ಜಮೀನ್ ಪರ್ ಸಿನಿಮಾ ಪ್ರಚಾರಕ್ಕಾಗಿ ಅಮಿರ್ ಈ ಕೆಲಸ ಮಾಡಿದ್ದಾರೆ, ಜೂನ್ 20ರಂದುಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾ ಸಕ್ಸಸ್ ಗಾಗಿ ನಟ ನಟಿಯರು ಏನೆಲ್ಲ ಮಾಡ್ತಾರೆ ದೇವರೇ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೆನೆಲಿಯಾ ದೇಶ್ಮುಖ್ ಕೂಡ ನಟಿಸಿರುವ ಈ ಕ್ರೀಡಾ ಹಾಸ್ಯ ನಾಟಕವು ಅವರ ಮತ್ತು ದರ್ಶೀಲ್ ಸಫಾರಿ ಅವರ 2007 ರ ಮಾಸ್ಟರ್ ಪೀಸ್ ತಾರೆ ಜಮೀನ್ ಪರ್ ಚಿತ್ರದ ಮುಂದುವರಿದ ಭಾಗವಾಗಿದೆ.