Menu
12

60ನೇ ಹುಟ್ಟುಹಬ್ಬಕ್ಕೂ ಮುನ್ನ ಹೊಸ ಗೆಳತಿ ಗೌರಿ ಪರಿಚಯಿಸಿದ ಅಮಿರ್ ಖಾನ್!

aamir khan

ನವದೆಹಲಿ: ಮಾರ್ಚ್ 14[ಶುಕ್ರವಾರ] 60ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಒಂದು ದಿನದ ಮುನ್ನ ಬಾಲಿವುಡ್ ನಟ ಅಮೀರ್ ಖಾನ್ ತನ್ನ ಹೊಸ ಗೆಳತಿ ಗೌರಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

25 ವರ್ಷಗಳ ಹಿಂದೆ ಗೌರಿ ಪರಿಚಯ ಆಗಿದ್ದು, ಅಂದಿನಿಂದ ಪರಸ್ಪರ ಭೇಟಿ ಆಗುತ್ತಿದ್ದೆವು. ಜೊತೆಯಾಗಿ ಇರಲು ನಿರ್ಧರಿಸಿದ್ದು, ಕಳೆದ ಒಂದೂವರೆ ವರ್ಷದಿಂದ ಜೊತೆಗೆ ಇದ್ದೇವೆ ಎಂದು ಅಮೀರ್ ಖನ್ ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಮುಂದೆ ಹೊಸ ಗೆಳತಿ ಗೌರಿಯನ್ನು ಪರಿಚಯಿಸಿದ್ದು, ಮುಂಬೈನಲ್ಲಿ ನಿನ್ನೆ ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ಗೆ ಗೌರಿಯನ್ನು ಪರಿಚಯಿಸಿದ್ದೇನೆ ಎಂದು ಹೇಳಿದರು.

ಅಮಿರ್ ಖಾನ್ ಮೊದಲ ಪತ್ನಿ ರೀನಾ ಖಾನ್ ಗೆ ಎರಡು ಮಕ್ಕಳು ಇದ್ದಾರೆ. ಕಿರಣ್ ರಾವ್ ಅವರನ್ನು ೧೨೦೦೫ರಲ್ಲಿ ಎರಡನೇ ಮದುವೆ ಆಗಿದ್ದ, ೨೦೨೧ರಲ್ಲಿ ವಿಚ್ಛೇದನ ನೀಡಿದ್ದರು. ಇಬ್ಬರಿಗೆ ಆಜಾದ್ ಎಂಬ ಮಗ ಇದ್ದಾನೆ.

Related Posts

Leave a Reply

Your email address will not be published. Required fields are marked *