ಜ್ವರವೆಂದು ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗೆ ಹೋಗಿರುವ ೨೩ ವರ್ಷದ ಯುವಕನ ಬಾಳು ನರಕಸದೃಶವಾಗಿ ಹೋಗಿದೆ. ಜ್ವರವೆಂದು ಚಿಕಿತ್ಸೆಗೆ ಹೋದಾತ ಹಾಸಿಗೆ ಹಿಡಿದು ಮೇಲೇಳಲಾಗದ ಸ್ಥಿತಿ ತಲುಪಿ ಏಳು ತಿಂಗಳು ಕಳೆದಿದೆ. ರಾಜ್ಯದ ಹೆಸರಾಂತ ಪ್ರತಿಷ್ಠಿತ ಇಎಸ್ಐ ಆಸ್ಪತ್ರೆ ವೈದ್ಯರು ಮಾಡಿದ ಎಡವಟ್ಟು ಇದಾಗಿದೆ. ಯುವಕ ಸಾವು, ಬದುಕು ಯಾವುದೂ ತಿಳಿಯದ ಸ್ಥಿತಿ ತಲುಪಿ ದ್ದಾನೆ.
ಯುವಕನ ತಲೆ ಹಾಗೂ ಬೆನ್ನಲ್ಲಿ ನೀರು ತುಂಬಿದೆ ಎಂದು ಹೇಳಿ ವೈದ್ಯರು ಬೇರೆ ಆಸ್ಪತ್ರೆಗೆ ಕಳಿಸಿದ್ದರು. ನಂತರ ಇಎಸ್ ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ. ಏಳು ತಿಂಗಳಿಂದ ಆಸ್ಪತ್ರೆ ಬೆಡ್ ಮೇಲೆಯೇ ಮಲಗಿರುವ ಯುವಕ ಅಮ್ಮ ಎಂಬ ಒದ ಹೊರತು ಏನೂ ಮಾತನಾಡುತ್ತಿಲ್ಲ. ನೀರು, ಆಹಾರ ಸೇವಿಸುತ್ತಿಲ್ಲ, ಗಂಟಲು ಮೂಲಕ ಹೋಲ್ ಮಾಡಿ ಹಾಲು ನೀರು ನೀಡಲಾಗು ತ್ತಿದೆ. ಒಟ್ಟಿನಲ್ಲಿ ಯುವಕನ ಜೀವನ ನರಕ ಯಾತನೆಯಾಗಿ ಹೋಗಿದೆ.
ಸದ್ಯ ಯಾವುದೇ ಟ್ರೀಟ್ಮೆಂಟ್ ನೀಡದ ಇಎಸ್ಐ ವೈದ್ಯರು ಮನೆಗೆ ಕರೆದುಕೊಂಡು ಹೋಗಿ ಅಂತ ಒತ್ತಾಯಿಸುತ್ತಿದ್ದಾರೆ, ಮಗನನ್ನು ಈ ಪರಿಸ್ಥಿತಿಯಲ್ಲಿ ಕರೆದುಕೊಂಡು ಹೋಗಲ್ಲ ಎಂದು ತಾಯಿ ಹೇಳುತ್ತಿದ್ದಾರೆ. ಚಿಕಿತ್ಸೆ ಹೆಸರಲ್ಲಿ ಎರಡು ಲಕ್ಷ ರೂ. ಖರ್ಚಾಗಿ ಹೋಗಿದೆ. ಕುಳಿತು ಮಾತನಾಡಿ ಪರಿಹರಿಸೋಣ ಎಂದು ವೈದ್ಯರು ಹೇಳುತ್ತಿದ್ದಾರೆ.
ಮನೆಗಳಲ್ಲಿ ಕೆಲಸ ಮಾಡ್ಕೊಂಡು ಜೀವನ ನಡೆಸ್ತಿದ್ದ ಯುವಕನ ತಾಯಿ ಲಕ್ಷ್ಮೀ ಈ ಹಿಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು, ಆದರೆ ದೂರು ದಾಖಲಿಸದೆ ರಾಜಾಜಿನಗರ ಪೊಲೀಸರು ವಾಪಸ್ ಕಳಿಸಿದ್ದರು. ಮೊದಲು ಜ್ವರ ಬಂದಿದೆ, ನಂತರ ಮೆದಳು ಜ್ವರ, ತಲೆಯಲ್ಲಿ ಗಡ್ಡೆ ಬೆಳದಿದೆ, ಇನ್ ಫೆಕ್ಷನ್ ಆಗಿದೆ ಎಂದು ಹೇಳುತ್ತಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿಲ್ಲ ಎಂದು ತಾಯಿ ಆರೋಪಿ ಸಿದ್ದಾರೆ.


