ನೆಲಮಂಗಲ: ನೆಲಮಂಗಲದಲ್ಲಿ ಲವ್ವರ್ ಗೆ ಕೊಟ್ಟಿದ್ದ ಹಣಕಾಸು ವಿಚಾರದಲ್ಲಿ ನಡೆಯುತ್ತಿದ್ದ ಜಗಳ ಬಿಡಿಸಲು ಮಧ್ಯ ಬಂದ ಯುವಕನಿಗೆ ಚಾಕು ಇರಿದ ಘಟನೆ ನೆಲಮಂಗಲ ಟೌನ್‌ನಲ್ಲಿ ನಡೆದಿದೆ.
ವಿನಾಯಕ ಜ್ಯೂಸ್ ಸೆಂಟರ್ ಬಳಿ ನಡೆದ ಗಲಾಟೆಯಲ್ಲಿ ಚೇತನ್ ಎಂಬ ಯುವಕ ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ.
ರಾತ್ರಿ ವಿನಾಯಕ ಜ್ಯೂಸ್ ಸೆಂಟರ್ ನಲ್ಲಿ ಕೆಲಸ ಮಾಡುವ ಸುದೀಪ್ ಎಂಬಾತನು ತನ್ನ ಮಾಜಿ ಗೆಳತಿ ಹೇಮಾಗೆ ಎರಡು ಸಾವಿರ ರೂಪಾಯಿ ಹಣ ನೀಡಿದ್ದ.
ಕೆಲ ದಿನಗಳ ಹಿಂದೆ ಲವ್ ಬ್ರೇಕಪ್ ಆಗಿತ್ತು, ಬಳಿಕ ಹೇಮಾ ಒಂದು ಸಾವಿರ ರೂಪಾಯಿ ವಾಪಸ್ ನೀಡಿದ್ದಳು. ಆದರೆ ಉಳಿದ ಒಂದು ಸಾವಿರ ಹಣ ಪಡೆಯಲು ಸುದೀಪ್ ಪದೇಪದೆ ಯುವತಿಗೆ ಕರೆ ಮಾಡುತ್ತಿದ್ದ.
ಈ ಹಿನ್ನೆಲೆಯಲ್ಲಿ ತೇಜಸ್ ಎಂಬಾತನು “ನೀನು ಪದೇಪದೆ ನಮ್ಮ ಹುಡುಗಿ ಹೇಮಾಗೆ ಯಾಕೆ ಕರೆ ಮಾಡ್ತೀಯಾ?” ಎಂದು ಕೇಳಿ ಗಲಾಟೆ ಆರಂಭಿಸಿದ್ದ. ನಂತರ ಬಾಕಿ ಇದ್ದ ಒಂದು ಸಾವಿರ ರೂಪಾಯಿ ಹಣವನ್ನು ಸ್ಕ್ಯಾನರ್ ಮೂಲಕ ಕಳಿಸಿ,ಮತ್ತೆ ಗಲಾಟೆ ಮಾಡುತ್ತಿದ್ದ ವೇಳೆಯಲ್ಲಿ ಗಲಾಟೆ ಬಿಡಿಸಲು ಮಧ್ಯ ಬಂದ ತೇಜಸ್ ಮೇಲೆ ಹಲ್ಲೆ ನಡೆಸಿ ಹೊಟ್ಟೆ ಭಾಗಕ್ಕೆ ಚಾಕು ಇರಿದಿದ್ದಾರೆ.
ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಚೇತನ್‌ರನ್ನು ತಕ್ಷಣವೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಕಲಂ 352 ಮತ್ತು 109 BNS ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯಾಗಿರುವ ಎ1ಅರೋಪಿ ತೇಜಸ್‌ನನ್ನು ಇದೀಗ ನೆಲಮಂಗಲ ಪೊಲೀಸರು ಬಂಧಿಸಿ ಮತ್ತಿಬ್ಬರಿಗೆ ಶೋಧ ಕಾರ್ಯ ಮುಂದುವರಿದಿದೆ.