ಬೆಂಗಳೂರಿನ ಆಡುಗೋಡಿಯ ಎಂ.ಆರ್.ನಗರದಲ್ಲಿ ಮಾತು ಬಾರದ ಕಾಲು ಸ್ವಾಧೀನವಿಲ್ಲದ ಯುವತಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿರುವ ಪೈಶಾಚಿಕ ಕೃತ್ಯ ನಡೆದಿದೆ.
ಮಾತು ಬಾರದ ಕಾಲು ಸ್ವಾಧೀನವಿಲ್ಲದ ಯುವತಿ ಬೆಳವಣಿಗೆ ಇಲ್ಲದೆ ಮಗುವಿನಂತೆ ಇದ್ದರೂ ಕಾಮುಕ ಮನೆಗೆ ನುಗ್ಗಿ ಅತ್ಯಾಚಾರ ನಡೆಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಘ್ನೇಶ್ ಎಂಬಾತ ಈ ಕೃತ್ಯ ಎಸಗಿದ್ದು, ವಿಷಯ ತಿಳಿದ ಸ್ಥಳೀಯರು ರೊಚ್ಚಿಗೆದ್ದು ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮನೆಯವರೆಲ್ಲ ಈ ಯುವತಿಯನ್ನು ಮನೆಯಲ್ಲಿ ಬಿಟ್ಟು ಹೊರಗಿನಿಂದ ಚಿಲಕ ಹಾಕಿ ಮದುವೆಗೆಂದು ಹೋಗಿದ್ದರು. ಮನೆ ಬಳಿ ಬಂದ ಕಾಮುಕ ವಿಘ್ನೇಶ್ ಗಾಂಝಾ ನಶೆಯಲ್ಲಿದ್ದು, ಚಿಲಕ ತೆಗೆದು ಮನೆ ಒಳಗೆ ನುಗ್ಗಿ ಮನೆಯ ಒಳಗಿನಿಂದ ಚಿಲಕ ಹಾಕಿಕೊಂಡಿದ್ದ.
ಮದುವೆ ಮಧ್ಯೆ ಮಗಳನ್ನು ನೋಡಿಕೊಂಡು ಹೋಗೋಣ ಎಂದು ತಾಯಿ ಬಂದಿದ್ದಾಗ ಮನೆಗೆ ಒಳಗೆನಿಂದ ಚಿಲಕ ಹಾಕಲಾಗಿತ್ತು. ಕಾಲಿನಿಂದ ಒದ್ದು ಬಾಗಿಲು ತೆಗೆದಿದ್ದ ತಾಯಿ ಮಗಳ ಸ್ಥರಿ ನೋಡಿ ಬೆಚ್ಚಿ ಬಿದ್ದಿದ್ದಾರೆ, ಮಗಳ ದೇಹದ ಮೇಲೆ ಬಟ್ಟೆ ಇರಲಿಲ್ಲ, ಆರೋಪಿ ಬಾಗಿಲ ಬಳಿ ಅವಿತು ಕುಳಿತಿದ್ದ. ಕೂಡಲೇ ಒಳ ಉಡುಪು ಧರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ತಕ್ಷಣ ಸ್ಥಳೀಯರೆಲ್ಲ ಆತನನ್ನು ಹಿಡಿದು ಥಳಿಸಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿ ದೂರು ದಾಖಲಿಸಿದ್ದಾರೆ.
ಆಡುಗೋಡಿ ಪೊಲೀಸರಿಂದ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


