ಮಂಡ್ಯದ ಕೆಆರ್‌ಎಸ್ ನಲ್ಲಿ ಬಸ್ ರಿವರ್ಸ್ ತೆಗೆಯುವಾಗ ನಡೆದ ಅವಘಡದಲ್ಲಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕೆಆರ್‌ಎಸ್‌ಗೆ ಪ್ರವಾಸ ಬಂದಿದ್ದ ಕೇರಳದ ಮಹಿಳೆ ಕೌಸಲ್ಯಾ ಪಾರ್ಕಿಂಗ್ ಬಳಿ ಊಟ ಮಾಡುತ್ತ ಕುಳಿತಿದ್ದಾಗ ಈ ದುರಂತ ಸಂಭವಿಸಿದ್ದು, ಮತ್ತೊಬ್ಬರು ಕೇರಳದ ಮಹಿಳೆ ಗಾಯಗೊಂಡಿದ್ದಾರೆ.
ಕೆಆರ್‌ಎಸ್ ವೀಕ್ಷಣೆ ಬಳಿಕ ಪಾರ್ಕಿಂಗ್ ಬಳಿ ಕೌಸಲ್ಯಾ ಹಾಗೂ ನಾರಾಯಣಿ ಊಟ ಮಾಡುತ್ತಿದ್ದರು. ಬಸ್ ಹಿಂದೆ ಇದ್ದ ಈ ಮಹಿಳೆಯರನ್ನು ಗಮನಿಸದೆ ಚಾಲಕ ಬಸ್ ರಿವರ್ಸ್ ತೆಗೆದುಕೊಂಡಾಗ ಈ ಅನಾಹುತ ನಡೆದಿದೆ.
ಮಕ್ಕಳನ್ನು ಪ್ರವಾಸಕ್ಕೆ ಕರೆತಂದಿದ್ದ ಕೇರಳದ ಬಸ್ ಗುದ್ದಿ ಕೌಸಲ್ಯಾ ಮೃತಪಟ್ಟರೆ ನಾರಾಯಣಿ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಆರ್‌ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷುಲ್ಲಕ ವಿಚಾರಕ್ಕೆ ಯುವಕನಿಗೆ ಚಾಕು ಇರಿತ
ಹುಬ್ಬಳ್ಳಿ ನಗರದ ಯಲ್ಲಾಪುರ ಓಣಿಯ ಬುಡ್ಡು ಪಾನ್ ಶಾಪ್ ಬಳಿ ಅಫ್ತಾಬ್ ಎಂಬ ಯುವಕನಿಗೆ ಚಾಕು ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಏಕಾಏಕಿ ಮೂರ್ನಾಲ್ಕು ಜನರ ತಂಡ ಬಂದು ಪಾನ್ ಶಾಪ್ ಬಳಿ ನಿಂತಿದ್ದ ಯುವಕ ಅಫ್ತಾಬ್‌ಗೆ ಚಾಕು ಇರಿದಿದೆ. ಎದೆ, ಪಕ್ಕೆ ಹಾಗೂ ಹೊಟ್ಟೆಯ ಭಾಗಕ್ಕೆ ಚಾಕು ಇರಿದಿದ್ದು, ಹಳೆಯ ದ್ವೇಷವೇ ಚಾಕು ಕಾರಣ ಎನ್ನಲಾಗಿದೆ.
ಚಾಕು ಇರಿತಕ್ಕೊಳಗಾದ ಅಫ್ತಾಬ್ ಸ್ಥಿತಿ ಗಂಭೀರವಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದುಷ್ಕರ್ಮಿಗಳ ಪತ್ತೆಗೆ ಬೆಂಡಿಗೇರಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.


