Thursday, September 04, 2025
Menu

ಸುದೀರ್ಘ ಅವಧಿಯ ಅಪರೂಪದ ಚಂದ್ರಗ್ರಹಣ ಸೆ.7- 8 ರಂದು

ಸೆ.7 ಮತ್ತು 8 ರಂದು ಚಂದ್ರಗ್ರಹಣ ಸಂಭವಿಸಲಿದ್ದು, ಭಾರತದಾದ್ಯಂತ ಗೋಚರಿಸಲಿದೆ. ಇದು ಸುದೀರ್ಘ ಅವಧಿಯ ಅಪರೂಪದ ಚಂದ್ರಗ್ರಹಣ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸೆ.7ರಂದು ರಾತ್ರಿ 9:57ಕ್ಕೆ ಸ್ಪರ್ಶಕಾಲವಿದ್ದು ಚಂದ್ರಗ್ರಹಣದ ಪೂರ್ಣ ಪ್ರಭಾವದ ಆರಂಭವು ಮಧ್ಯರಾತ್ರಿ 12:28 ರಿಂದ 1:56 ರವರೆಗೆ ಇರಲಿದೆ, ರಾತ್ರಿ 1:26ಕ್ಕೆ ಮೋಕ್ಷಕಾಲವಾಗಿರುತ್ತದೆ. ಮೂರು ಗಂಟೆ ಗ್ರಹಣ ಸಂಭವಿಸಲಿದೆ.  ರಕ್ತವರ್ಣದಲ್ಲಿ ಚಂದ್ರ ಗೋಚರಿಸಲಿದ್ದು, ಪೂರ್ಣ ಚಂದ್ರಗ್ರಹಣವಿರುತ್ತದೆ. ಇಡೀ ಚಂದ್ರ ಭೂಮಿಯ ದಟ್ಟವಾದ ನೆರಳನ್ನು ಪ್ರವೇಶಿಸುತ್ತದೆ. ಇದು ಅಪರೂಪದ ವಿದ್ಯಮಾನ ಎಂದು ನೆಹರೂ ತಾರಾಲಯದ ನಿರ್ದೇಶಕ ಗುರುಪ್ರಸಾದ್‌ ತಿಳಿಸಿದ್ದಾರೆ.

ಸ್ಪರ್ಶಕಾಲ: 8.58 ನಿಮಿಷ, ಮಧ್ಯಮ: 9.57 (ಚಂದ್ರನ ಗೋಲದ ಒಂದು ಪಾರ್ಶ್ವ ನಿಧಾನವಾಗಿ ಬಣ್ಣ ಬದಲಾಯಿಸುವ ಪ್ರಕ್ರಿಯೆ ಆರಂಭ), ರಾತ್ರಿ 11 ಗಂಟೆಯಿಂದ 12:22 ನಿಮಿಷದ ವರೆಗೆ ಸಂಪೂರ್ಣ ಚಂದ್ರಗ್ರಹಣದ ದೃಶ್ಯ ಗೋಚರ. ಗ್ರಹಣ ಮೋಕ್ಷ ಸೆಪ್ಟೆಂಬರ್ 8 ರಂದು 2:25 ನಿಮಿಷ. 5 ಗಂಟೆ 27 ನಿಮಿಷಗಳ ಸುದೀರ್ಘ ಗ್ರಹಣವನ್ನು ಬರಿ ಕಣ್ಣಿನಿಂದಲೇ ನೋಡಬಹುದು.

Related Posts

Leave a Reply

Your email address will not be published. Required fields are marked *