ಬಿಜಾಪುರದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಪ್ಟ್ ಆಗಿದ್ದ ಆರೋಪಿಯನ್ನು ಚಿಕಿತ್ಸೆಗಾಗಿ ಪೊಲೀಸರು ಕಿದ್ವಾಯಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಚೇತನ್ ಕಲ್ಯಾಣಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ, ಕಿದ್ವಾಯಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತಂದಿದ್ದ ವೇಳೆ ಜೈಲು ಸಿಬ್ಬಂದಿ ಕಣ್ತಪ್ಪಿಸಿ ಓಡಿ ಹೋಗಿದ್ದಾನೆ.
ಆರೋಪಿ ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ, ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಯ ಬೇಜವಾಬ್ದಾರಿಯಿಂದ ಆರೋಪಿ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಗರೇಟ್ ದುಡ್ಡು ಕೇಳಿದ್ದಕ್ಕೆ ಕಣ್ಣಿಗೆ ಖಾರದ ಪುಡಿ ಎರಚಿದರು
ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಂಜನಾಪುರದ ಬೇಕರಿಗೆ ಮಚ್ಚು-ಲಾಂಗು ಹಿಡದು 3 ಆಟೋದಲ್ಲಿ ಬಂದ 15 ಜನ ದಾಂಧಲೆ ನಡೆಸಿದ್ದಾರೆ. ಮೊದಲು ಬೇಕರಿಗೆ ಬಂದಿದ್ದ ಮೂವರು ಪುಡಿ ರೌಡಿಗಳು ಸಿಗರೇಟ್ ತಗೊಂಡಿದ್ದು, ಮಾಲೀಕ ಹಣ ಕೇಳಿದಾಗ ಆವಾಜ್ ಹಾಕಿ ಹೋಗಿದ್ದರು.
ಮತ್ತೆ ಮೂರು ಆಟೊದಲ್ಲಿ ಬಂದ ಪುಂಡರು ಬೇಕರಿಯಲ್ಲಿ ಗಾಜಿನ ಭರಣಿ ಒಡೆದು ಹಾಕಿ, ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಬೇಕರಿ ಮಾಲೀಕನ ತಮ್ಮನ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ.
112ಗೆ ಕರೆ ಮಾಡಿ ಹೊಯ್ಸಳ ಬರುತ್ತಿದ್ದಂತೆ ಕೆಲವರು ಪರಾರಿ ಆಗಿ ಮೂವರು ಸಿಕ್ಕಿಬಿದ್ದಿದ್ದಾರೆ. ಘಟನೆ ಸಂಬಂದ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.