Menu

ಅಬ್ಬಿ ಫಾಲ್ಸ್‌ ನೀರಲ್ಲಿ ಕೊಚ್ಚಿಕೊಂಡು ಹೋದ ಬೆಂಗಳೂರಿನ ವ್ಯಕ್ತಿ

ಬೆಂಗಳೂರಿನ ವ್ಯಕ್ತಿಯೊಬ್ಬರು ಹೊಸನಗರ ತಾಲೂಕಿನ ಅಬ್ಬಿ ಫಾಲ್ಸ್‌ನಲ್ಲಿ ಫೋಟೋ ತೆಗೆಸಿಕೊಳ್ಳಲು ಹೋಗಿ ನೀರು ಪಾಲಾಗಿದ್ದಾರೆ. ಮೃತರನ್ನು ಬೆಂಗಳೂರಿನ ನಾಗರಬಾವಿಯ ಖಾಸಗಿ ಕಂಪನಿಯೊಂದರ ಮ್ಯಾನೇಜರ್ ರಮೇಶ್ (35) ಎಂದು ಗುರುತಿಸಲಾಗಿದೆ.

ಐವರು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ವೇಳೆ ಈ ದುರಂತ ಸಂಭವಿಸಿದೆ.ಫೋಟೋಗೆ ಪೋಸ್ ನೀಡಲು ಫಾಲ್ಸ್‌ಗೆ ಇಳಿದಿದ್ದಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.  ಫಾಲ್ಸ್‌ನಲ್ಲಿ ರಮೇಶ್‌  ಕೊಚ್ಚಿಕೊಂಡು ಹೋಗುವ  20 ಸೆಕೆಂಡ್‌ನ ವೀಡಿಯೊ ವೈರಲ್‌ ಆಗಿದೆ.

ವೀಡಿಯೊದಲ್ಲಿ ರಮೇಶ್‌ ಬಂಡೆ ಮೇಲೆ ಕುಳಿತಿರುತ್ತಾರೆ. ವೀಡಿಯೊದ ಆರಂಭದಲ್ಲಿ ತಮ್ಮ ಎರಡು ಕೈಗಳನ್ನು ಮೇಲೆತ್ತಿ ಸಂಭ್ರಮಿಸುತ್ತಾರೆ. ನಂತರ ತಾನು ಕುಳಿತಿದ್ದ ಬಂಡೆಯಿಂದ ಕೆಳಗಿಳಿಯುತ್ತಾರೆ. ಈ ವೇಳೆ ನೀರಿನ ರಭಸಕ್ಕೆ ರಮೇಶ್‌ ತೇಲಿ ಹೋಗಿದ್ದಾರೆ. ಕೊಚ್ಚಿಕೊಂಡು ಹೋಗುತ್ತಿದ್ದಂತೆ ಸ್ನೇಹಿತರು ಕೂಗಿಕೊಳ್ಳುವುದು ರೆಕಾರ್ಡ್‌ ಆಗಿದೆ.

ಘಟನೆಯ ಬಳಿಕ ರಮೇಶ್ ಮೃತದೇಹವು ಫಾಲ್ಸ್‌ನ ಕೆಳಭಾಗದಲ್ಲಿ ಪತ್ತೆಯಾಗಿದೆ. ನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *