Saturday, November 01, 2025
Menu

ಲೈಟ್ ಆಫ್ ವಿಚಾರಕ್ಕೆ ಜಗಳ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಕಚೇರಿಯ ಲೈಟ್ ಆಫ್ ಮಾಡುವ ವಿಚಾರಕ್ಕೆ ರಾತ್ರಿ ಪಾಳಿಯಲ್ಲಿದ್ದ  ಕೆಲಸಗಾರರ ನಡುವೆ ಆರಂಭವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ವಿಂದರಾಜನಗರದಲ್ಲಿ ಸಂಭವಿಸಿದೆ.

ಭೀಮೇಶ್ ಬಾಬು (41)ಕೊಲೆಯಾದವರು, ಕೃತ್ಯ ನಡೆಸಿದ ಸೋಮಲ ವಂಶಿ (24)ಯನ್ನು  ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ.

ಸಹದ್ಯೋಗಿ ಸೋಮಲ ವಂಶಿ ಎಂಬಾತ ಡಂಬೆಲ್‌ನಿಂದ ಹಣೆಗೆ ಹೊಡೆದ ಪರಿಣಾಮ ಭೀಮೇಶ್ ಬಾಬು ಮೃತಪಟ್ಟಿದ್ದಾನೆ. ಬಳಿಕ ಆರೋಪಿಯು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾಹಿತಿ ನೀಡಿದ್ದಾರೆ.

ಸಿನಿಮಾ ಚಿತ್ರೀಕರಣದ ವಿಡಿಯೋಗಳನ್ನು ದಿನದ ಆಧಾರದಲ್ಲಿ ಸಂಗ್ರಹಿಸಿಡುವ ಕಂಪನಿಯಲ್ಲಿ ವಿಜಯವಾಡ ಮೂಲದ ಸೋಮಲ ವಂಶಿ ಹಾಗೂ ಚಿತ್ರದುರ್ಗ ಮೂಲದ ಭೀಮೇಶ್ ಬಾಬು ಕೆಲಸ ಮಾಡಿಕೊಂಡಿದ್ದರು.

ಕಚೇರಿಯಲ್ಲಿ ರಾತ್ರಿ ತಂಗುತ್ತಿದ್ದ ಇಬ್ಬರ ನಡುವೆ ತಡರಾತ್ರಿ 1:30ರ ಸುಮಾರಿಗೆ ಲೈಟ್ ಆಫ್ ಮಾಡುವ ವಿಚಾರದಲ್ಲಿ ಪರಸ್ಪರ ಜಗಳ ಆರಂಭವಾಗಿದೆ. ಈ ಸಮಯದಲ್ಲಿ ಕೋಪಗೊಂಡ ಸೋಮಲ ವಂಶಿ ಡಂಬೆಲ್‌ನಿಂದ ಭೀಮೇಶ್ ಬಾಬುವಿನ ಹಣೆಯ ಮೇಲೆ ಹೊಡೆದಿದ್ದ. ಪರಿಣಾಮ ರಕ್ತಸ್ರಾವವಾಗಿ ಭೀಮೇಶ್ ಬಾಬು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೃತ್ಯದ ಬಳಿಕ ಆರೋಪಿ ಸೋಮಲ ವಂಶಿ ಸ್ವತಃ ತಾತೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *