ಗಂಡು ಸಂಗಾತಿ ಹಾವನ್ನು ಕೊಂದವನ ಮನೆಗೆ ಬಂದ ಹೆಣ್ಣು ಹಾವು ಆತನಿಗೆ ಕಚ್ಚಿ ಕೊಂದು ಪ್ರತೀಕಾರ ತೀರಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಹೋರಾ ಗ್ರಾಮದ ನಿವಾಸಿ ಮನೋಜ್ ಅವರ ಮಗುವಿನ ನಾಮಕರಣ ಸಮಾರಂಭಕ್ಕೆ ಸಂಬಂಧಿಕರು ಮನೆಗೆ ಬಂದಿದ್ದರು. ಮನೋಜ್ ಅವರ ಪತ್ನಿಯ ಸಹೋದರ ಸಚಿನ್ ಕೂಡ ಬಂದಿದ್ದರು. ಮನೆಯ ಒಳಗೆ ಕೋಣೆಯಲ್ಲಿ ಹಾವು ಇರುವುದನ್ನು ಕಂಡು ಕೂಡಲೇ ದೊಣ್ಣೆಯಿಂದ ಹಾವನ್ನು ಹೊಡೆದು ಸಾಯಿಸಿದ್ದಾರೆ. ಬಳಿಕ ಕೆಲವೇ ದಿನಗಳಲ್ಲಿ ಆ ಗಂಡು ಹಾವಿನ ಸಂಗಾತಿ ಮೂವರಿಗೆ ಕಚ್ಚಿ ಸೇಡು ತೀರಿಸಿಕೊಂಡಿದೆ. ಮೂವರಲ್ಲಿ ಮನೋಜ್ ಹಾವು ಕಡಿತದಿಂದ ಮೃತಪಟ್ಟಿದ್ದಾರೆ.
ರಾತ್ರಿ ಮನೋಜ್ ಹೆಂಡತಿ ಹಾಗೂ ಮಗು ಜೊತೆ ಮಲಗಿದ್ದಾಗ ಬೆಳಗ್ಗೆ 4 ಗಂಟೆಗೆ ಮನೋಜ್ಗೆ ಹಾವು ಕಚ್ಚಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಸ್ವಲ್ಪ ಸಮಯದ ಬಳಿಕ ಆರೋಗ್ಯ ತುಂಬಾ ಹದಗೆಟ್ಟು ಮೃತಪಟ್ಟಿದ್ದಾರೆ. ಮನೋಜ್ ತಮ್ಮ ದಿನೇಶ್ ಸೇರಿ ಮೂವರಿಗೆ ಹಾವು ಕಚ್ಚಿತ್ತು. ಅವರ ಸ್ಥಿತಿ ಸ್ಥಿರವಾಗಿದೆ. ಗ್ರಾಮಸ್ಥರು ಆ ಹೆಣ್ಣು ಹಾವನ್ನು ಹೊಡೆದು ಸಾಯಿಸಿದ್ದಾರೆ.