Menu

ಕುಡಿದ ಮತ್ತಿನಲ್ಲಿ ಕೋಲಾರ ರೈಲು ನಿಲ್ದಾಣಕ್ಕೆ ಕಾರು ನುಗ್ಗಿಸಿದ ಭೂಪ

ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಕೋಲಾರ ರೈಲು ನಿಲ್ದಾಣದೊಳಗೆ ಕಾರು ನುಗ್ಗಿಸಿದ್ದಾನೆ. ಟೇಕಲ್ ರೈಲ್ವೆ ನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಈ ಘಟನೆ ಸಂಭವಿಸಿದೆ.

ಕಾರು ರೈಲು ಪ್ಲಾಟ್‌ಫಾರ್ಮ್ ಮೇಲಿಂದ ಹಳಿಗಳ ಮೇಲೆ ಅಪ್ಪಳಿಸಿ ಕಾರು ಮತ್ತು ರೈಲ್ವೆ ಹಳಿ ಜಖಂಗೊಂಡಿದೆ. ರಾಕೇಶ್‌ ಎಂಬಾತ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಈ ಅವಾಂತರ ಮಾಡಿದ್ದು, ಪೊಲೀಸರು ಜೆಸಿಬಿ ಸಹಾಯದಿಂದ ಕಾರು ತೆರವುಗೊಳಿಸಿದ್ದಾರೆ.

ಬಂಗಾರಪೇಟೆ ರೈಲ್ವೆ ಪೊಲೀಸರು ಕಾರು ಮಾಲೀಕ ರಾಕೇಶ್‌ನನ್ನು ವಶಕ್ಕೆ ಪಡೆದು, ಬಂಗಾರಪೇಟೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Related Posts

Leave a Reply

Your email address will not be published. Required fields are marked *