ಪತ್ನಿ ಕುಡಿದು ಮನೆಗೆ ಬಂದಿದ್ದಾಳೆಂದು ಸಿಟ್ಟಿಗೆದ್ದ ಕುಡುಕ ಪತಿ ಆಕೆಯನ್ನು ಕೊಲೆ ಮಾಡಿರುವ ಘಟನೆ ಜಾರ್ಖಂಡ್ನ ರಾಮಗಢ ದಾತಮ್ ಬಾಡಿ ಝರಿಯಾದಲ್ಲಿ ನಡೆದಿದೆ. ಪತ್ನಿ ಶಿಲ್ಪಿ ದೇವಿಯನ್ನು ಕೊಲೆಗೈದ ಪತಿ ಉಪೇಂದ್ರ ಪರ್ಹಿಯಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಶಿಲ್ಪಿ ದೇವಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೇದಿನಿರೈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ. ಶಿಲ್ಪಿ ಕೂಡ ಕುಡಿದು ಮನೆಗೆ ಬಂದಾಗ ಉಪೇಂದ್ರ ಮನೆಯಲ್ಲಿ ಕುಡಿದ ಮತ್ತಿನಲ್ಲಿದ್ದ. ಆಕೆಯನ್ನು ನೋಡಿ ಕೋಪಗೊಂಡು ಪ್ರಶ್ನಿಸಿದ್ದು ಜಗಳಕ್ಕೆ ಕಾರಣವಾಯಿತು. ವಾಗ್ವಾದ ತೀವ್ರಗೊಂಡು ಉಪೇಂದ್ರ ಶಿಲ್ಪಿಯನ್ನು ಹೊಡೆದು ಮೇಲಕ್ಕೆತ್ತಿ ನೆಲಕ್ಕೆ ಹೊಡೆದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮೂರು ವರ್ಷಗಳ ಹಿಂದೆ ವಿವಾಹವಾದ ಈ ದಂಪತಿಗೆ ಒಂದು ಮಗುವಿದೆ.
ಮಾಜಿ ಪ್ರೇಯಸಿಯ ಕೊಲೆಗೈದ ಸ್ನೇಹಿತ
ಗೋರಖ್‌ಪುರದ ಜಂಗಲ್ ರಸೂಲ್‌ಪುರ ಗ್ರಾಮದಲ್ಲಿ ಬೇರೊಬ್ಬನನ್ನು ಮದುವೆಯಾಗಿದ್ದಕ್ಕಾಗಿ ಮಾಜಿ ಪ್ರೇಯಸಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಆರೋಪದ ಮೇಲೆ ಯುವಕನನ್ನು ಬಂಧಿಸಲಾಗಿದೆ. 20 ವರ್ಷದ ಶಿವಾನಿ ಸಂಬಂಧಿಯ ಮದುವೆಗೆ ಹೋಗಲು ತವರು ಮನೆಗೆ ಬಂದಿದ್ದಾಗ ಆಕೆಯನ್ನು ಭೇಟಿಯಾದ ಮಾಜಿ ಪ್ರಿಯಕರ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ಶವ ಆಕೆಯ ತವರು ಮನೆಯ ಬಾತ್ರೂಂನಲ್ಲಿ ಪತ್ತೆಯಾಗಿದೆ, ಕುತ್ತಿಗೆಯ ಮೇಲೆ ಗಾಯದ ಗುರುತುಗಳಿದ್ದವು ಎಂದು ಎಸ್‌ಪಿ ಉತ್ತರ ಜ್ಞಾನೇಂದ್ರ ಪ್ರಸಾದ್ ಹೇಳಿದ್ದಾರೆ. ಮದುವೆ ಮನೆಯಿಂದ 500 ಮೀಟರ್ ದೂರದಲ್ಲಿದ್ದ ದೀಪಕ್ ಎಂಬಾತನ ಮನೆಗೆ ಶ್ವಾನ ದಳ ತೆರಳಿದ್ದರಿಂದ ಕೊಲೆಗಾರ ಪತ್ತೆಯಾಗಿದ್ದಾನೆ, ವಿಚಾರಣೆಯ ಸಮಯದಲ್ಲಿ ವಿನಯ್ ಕೊನೆಗೂ ಆಕೆಯನ್ನು ಕೊಂದುಹಾಕಿದೆ ಎಂದು ಒಪ್ಪಿಕೊಂಡಿದ್ದಾನೆ.


