ಹೈದರಾಬಾದ್: ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಪುತ್ರಿ ಕೆ.ಕವಿತಾರನ್ನು ಬಿಆರ್ ಎಸ್ ಪಕ್ಷದ ವರಿಷ್ಠರಾಗಿರುವ ತಂದೆ ಕೆ. ಚಂದ್ರಶೇಖರ್ ರಾವ್ ಅಮಾನತುಗೊಳಿಸಿದ್ದಾರೆ.
ಭಾರತ್ ರಾಷ್ಟ್ರೀಯ ಸಮಿತಿ ಪಕ್ಷದಿಂದ ವಿಧಾನಪರಿಷತ್ ಸದಸ್ಯೆ ಆಗಿರುವ ಕೆ.ಕವಿತಾ ಅವರನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.
ತೆಲಂಗಾಣದ ಮಾಜಿ ಮುಖ್ಯಮಂತ್ರಿ ಹಾಗೂ ಬಿಆರ್ ಎಸ್ ಪಕ್ಷದ ವರಿಷ್ಠರಾಗಿರುವ ತಂದೆ ಕೆ. ಚಂದ್ರಶೇಖರ್ ರಾವ್ ಸ್ವತಃ ಪಕ್ಷ ವಿರೋಧಿ ಹೇಳಿಕೆ ಹಾಗೂ ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಅಮಾತನುಗೊಳಿಸಿದ್ದಾರೆ.
ಕೆ. ಕವಿತಾ ಇತ್ತೀಚೆಗೆ ತಮ್ಮದೇ ಪಕ್ಷದ ಮುಖಂಡರು ಹಾಗೂ ಮಾಜಿ ನೀರಾವರಿ ಸಚಿವರಾದ ಹರೀಶ್ ರಾವ್ ಹಾಗೂ ರಾಜ್ಯಸಭಾ ಸದಸ್ಯ ಜೆ. ಸಂತೋಷ್ ಕುಮಾರ್ ವಿರುದ್ಧ ಹೇಳಿಕೆ ನೀಡಿದ್ದರು. ಇದರಿಂದ ಆಡಳಿತಾರೂಢ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ವರವಾಗಿತ್ತು.