Menu

ಬಳ್ಳಾರಿಯನ್ನು ರಿಪಬ್ಲಿಕ್ ಮಾಡಿ ಹಾಳು ಮಾಡಿದ ಬಿಜೆಪಿ: ಸಚಿವ ಶರಣ್ ಪ್ರಕಾಶ್ ಪಾಟೀಲ್

ಈ ಹಿಂದೆ ಅಪಾರ ಗಣಿ ಹಣದಿಂದ ಇಡೀ ಬಳ್ಳಾರಿಯನ್ನು ರಿಪಬ್ಲಿಕ್ ಮಾಡಿ ಜನರ ನೆಮ್ಮದಿ ಹಾಳು ಮಾಡಿದ್ದಾರೋ ಅದೇ ಬಿಜೆಪಿ  ನಾಯಕರು ಕಲಬುರಗಿ ರಿಪಬ್ಲಿಕ್ ಆಗಿದೆ ಎಂದರೆ ಜನ ನಂಬುತ್ತಾರೆಯೇ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಪ್ರಶ್ನಿಸಿದರು.

ಕಲಬುರಗಿ ನಗರದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ನಾಯಕರು ಕಲಬುರಗಿಗೆ ಆಗಮಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ರಿಪಬ್ಲಿಕ್ ಆಫ್ ಕಲಬುರಗಿ ಆಗಿದೆ ಎಂದರೆ ರಿಪಬ್ಲಿಕ್ ಆಗುತ್ತದೆಯಾ, ಕಲಬುರಗಿ ಜಿಲ್ಲೆಯ ಜನತೆಗೆ ಗೊತ್ತು ಕಾಂಗ್ರೆಸ್ ಇತಿಹಾಸ ಏನು ಅಂತ, ನಾವು ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮಾಡಿದ್ದೇವೆಯೇ ಹೊರತು ರಿಪಬ್ಲಿಕ್ ಮಾಡಿಲ್ಲ. ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ ರಾಮುಲು ಇಲ್ಲಿ ಬಂದು ರಿಪಬ್ಲಿಕ್ ಆಪ್ ಕಲಬುರಗಿ ಬಗ್ಗೆ ಮಾತಾಡ್ತಾರೆ. ಮೊದಲು ನಿಮ್ಮ ನೈತಿಕತೆ ಏನೆಂದು ನೋಡಿಕೊಳ್ಳಿ ಎಂದು ಆಕ್ರೋಶ  ವ್ಯಕ್ತಪಡಿಸಿದರು.

ಪ್ರಿಯಾಂಕ್ ಖರ್ಗೆ ವಿರುದ್ದ ಬಿಜೆಪಿ ನಾಲ್ಕು ಬಾರಿ‌ ಪ್ರತಿಭಟನೆ ನಡೆಸಿದೆ. ಬಿಜೆಪಿಯವರ ಪ್ರತಿಭಟನೆಗಳು ಹಾಸ್ಯಾಸ್ಪದವಾಗಿವೆ. ಪ್ರಿಯಾಂಕ್ ಕಂಡ್ರೆ ಬಿಜೆಪಿಗೆ ಭಯ ಅನ್ನೋದು ಕಾಣಿಸ್ತಿದೆ ಎಂದು ಟೀಕಿಸಿದರು. ಬಳ್ಳಾರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾದಯಾತ್ರೆ ಮಾಡಿ ಆ ಎಲ್ಲ ಕಳಂಕವನ್ನು ತೊಳೆಯಲಿಲ್ಲವೇ ಎಂದರು.

ಛಲವಾದಿ ನಾರಾಯಣಸ್ವಾಮಿ ಪ್ರಿಯಾಂಕ್ ಖರ್ಗೆಗೆ ಏನಂದ್ರು ಅಂತ ನೀವೇ ಸಾಕ್ಷಿ ಇದ್ದಿರಿ. ಇಲ್ಲಿ ಬಾಯಿಗೆ ಬಂದಾಗೆ ಮಾತನಾಡಿ ತಕ್ಷಣ ಚಿತ್ತಾಪುರಕ್ಕೆ ಹೋಗಿದ್ದಾರೆ. ಅಲ್ಲಿ ನಮ್ಮ ಕಾರ್ಯಕರ್ತರು ಹೋಗಿ ಕ್ಷಮೆ ಕೇಳುವಂತೆ ಹೇಳಿದ್ದಾರೆ. ಯಾರೇಆಗಲಿ ಅವರು ಮತ ಕ್ಷೇತ್ರಕ್ಕೆ ಹೋಗಿ ಬೈದಾಗ ಕೇಳ್ತಾರೆ ಹೊರತು ಹೂವಿನ ಹಾರ ಹಾಕ್ತಾರ ಎಂದು ಪಾಟೀಲ್ ಪ್ರಶ್ನಿಸಿದರು.

Related Posts

Leave a Reply

Your email address will not be published. Required fields are marked *