ಗುಜರಾತ್, ಕೇರಳ, ಪಶ್ಚಿಮ ಬಂಗಾಳ ಮತ್ತು ಪಂಜಾಬ್ ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಜೂನ್ 19 ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಗುಜರಾತ್ನ ಎರಡು ವಿಧಾನಸಭಾ ಕ್ಷೇತ್ರಗಳಿಗೆ, ಕೇರಳ, ಪಶ್ಚಿಮ ಬಂಗಾಳ ಮತ್ತು ಪಂಜಾಬ್ನಲ್ಲಿ ತಲಾ ಒಂದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಜೂನ್ 23 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.
ಗುಜರಾತ್ನಲ್ಲಿ ಹಾಲಿ ಶಾಸಕ ಕರ್ಸನ್ಭಾಯ್ ಪಂಜಾಬಿ ಸೋಲಂಕಿ ನಿಧನದ ಬಳಿಕ ಕಾಡಿ ಕ್ಷೇತ್ರದ ಸ್ಥಾನ ತೆರವಾಗಿದೆ, ವಿಶಾವದರ್ ಕ್ಷೇತ್ರದಲ್ಲಿ ಭಯಾನಿ ಭೂಪೇಂದ್ರಭಾಯ್ ಗಂಡುಭಾಯ್ ಅವರ ರಾಜೀನಾಮೆಯಿಂದಾಗಿ ಅದೂ ತೆರವಾಗಿದೆ. ಕೇರಳದ ನಿಲಂಬೂರ್ ಕ್ಷೇತ್ರದಲ್ಲಿ ಪಿ.ವಿ ಅನ್ವರ್ ರಾಜೀನಾಮೆ ನೀಡಿರುವುದರಿಂದ ಉಪಚುನಾವಣೆ ನಡೆಯಲಿದೆ.
ಪಂಜಾಬ್ನ ಲುಧಿಯಾನ ಕ್ಷೇತ್ರದಲ್ಲಿ ಗುರುಪ್ರೀತ್ ಬಸ್ಸಿ ಗೋಗಿ ಅವರ ನಿಧನದಿಂದಾಗಿ ಸ್ಥಾನ ತೆರವಾಗಿದೆ. ಪಶ್ಚಿಮ ಬಂಗಾಳದ ಕಾಳಿಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ನಾಸಿರುದ್ದೀನ್ ಅಹಮದ್ ಅವರ ನಿಧನದಿಂದ ಉಪಚುನಾವಣೆ ನಡೆಯಲಿದೆ. ಈ ಎಲ್ಲಾ ಕ್ಷೇತ್ರಗಳಲ್ಲೂ ಜೂ.19ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.