ಮೈಸೂರಿನ ಹೆಚ್‌ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ಮೂವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಕಾಲುಗಳಿಗೆ ಹಗ್ಗ ಕಟ್ಟಿ ಮಹದೇವಸ್ವಾಮಿ, ಪತ್ನಿ ಮಂಜುಳಾ ಹಾಗೂ ಕಿರಿಯ ಮಗಳು ಹರ್ಷಿತಾ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.
ಮಹದೇವಸ್ವಾಮಿ ಅವರ ಹಿರಿಯ ಮಗಳು ಅರ್ಪಿತಾ ಮೈಸೂರಿನಲ್ಲಿ ಕಾನೂನು ಪದವಿ ಓದುತ್ತಿದ್ದಳು. ಎರಡನೇ ಮಗಳು ಹರ್ಷಿತಾ ಬಿ.ಸಿ.ಎ ವ್ಯಾಸಂಗ ಮಾಡು ತ್ತಿದ್ದಳು .ಅರ್ಪಿತಾ ಮೈಸೂರಿನಲ್ಲಿ ಅನ್ಯಜಾತಿಯ ಹುಡುಗನನ್ನು ಪ್ರೀತಿಸಿ ಆತನನ್ನೇ ಮದುವೆ ಆಗುವುದಾಗಿ ಪಟ್ಟು ಹಿಡಿದಿದ್ದಳು. ಆದರೆ ಸಮುದಾಯಕ್ಕೆ ಹೆದರಿದ ತಂದೆ ನಿರಾಕರಿಸಿದ್ದರು. ಹೀಗಾಗಿ ಅರ್ಪಿತಾ ಮನೆ ಬಿಟ್ಟು ತೆರಳಿದ್ದಳು. ಮಗಳ ನಿರ್ಧಾರದಿಂದ ಮರ್ಯಾದೆ ಹೋಯಿತು ಎಂದು ಭಾವಿಸಿ ಮಹದೇವಸ್ವಾಮಿ, ಪತ್ನಿ ಹಾಗೂ ಕಿರಿಯ ಮಗಳ ಸಮೇತ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆ ತೊರೆದಿದ್ದ ಹಿರಿಯ ಮಗಳು ಅರ್ಪಿತಾ, ತಂದೆ, ತಾಯಿ ಹಾಗೂ ಸಹೋದರಿಯ ಅಂತಿಮ ದರ್ಶನಕ್ಕೂ ಬರಲಿಲ್ಲ. ಹಿರಿಯ ಮಗಳ ಈ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.