ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ಬಂದ್ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ್ದ ಆದೇಶಕ್ಕೆ ಯುಎಸ್ ಡಿಸ್ಟ್ರಿಕ್ಟ್ ಜಡ್ಜ್ ಆಲಿಸನ್ ಬರೋಸ್ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಮೇ 29 ರಂದು ಬೋಸ್ಟನ್‌ನಲ್ಲಿ ನಡೆಯಲಿದೆ.
ಸರ್ಕಾರವು ಹಾರ್ವರ್ಡ್‌ನ ವಿದ್ಯಾರ್ಥಿ ಸಮೂಹದ ಕಾಲು ಭಾಗವನ್ನು, ವಿಶ್ವವಿದ್ಯಾಲಯ ಮತ್ತು ಅದರ ಧ್ಯೇಯಕ್ಕೆ ಗಣನೀಯವಾಗಿ ಕೊಡುಗೆ ನೀಡುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಅಳಿಸಿಹಾಕಲು ಪ್ರಯತ್ನಿಸಿದೆ ಎಂದು ಹಾರ್ವರ್ಡ್ ದಾಖಲಿಸಿರುವ ಮೊಕದ್ದಮೆಯಲ್ಲಿ ವಾದಿಸಿದೆ. ಈ ಕಾನೂನುಬಾಹಿರ ಮತ್ತು ಅನಗತ್ಯ ಕ್ರಮವನ್ನು ನಾವು ಖಂಡಿಸುತ್ತೇವೆ ಎಂದು ಹಾರ್ವರ್ಡ್ ಅಧ್ಯಕ್ಷ ಅಲನ್ ಗಾರ್ಬರ್ ತಿಳಿಸಿದ್ದಾರೆ. ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ನಿಷೇಧಿಸುವ ಆಡಳಿತದ ನಿರ್ಧಾರವು ಕಾನೂನು ಮತ್ತು ವಾಕ್ ಸ್ವಾತಂತ್ರ್ಯದ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ವಿಶ್ವವಿದ್ಯಾಲಯ ಹೇಳಿದೆ.
ಟ್ರಂಪ್‌ಹಾರ್ವರ್ಡ್ ವಿವಿಗೆ ವಿದೇಶಿ ವಿದ್ಯಾರ್ಥಿಗಳ ದಾಖಲಾತಿ ನಿರ್ಬಂಧಿಸುವಂತೆ ಆದೇಶಿಸಿಅಂಥ ವಿದ್ಯಾರ್ಥಿಗಳಿಗೆ ಬೇರೆ ವಿವಿ ಸೇರುವ ಅಥವಾ ದೇಶ ತೊರೆಯುವ ಆಯ್ಕೆ ನೀಡಿದ್ದರು. ಟ್ರಂಪ್ ಆದೇಶಕ್ಕೆ ನ್ಯಾಯಾಲಯದಿಂದ ತಡೆ ನೀಡಲಾಗಿದೆ. ಇದರಿಂದಾಗಿ ಹಾರ್ವರ್ಡ್‌ನಲ್ಲಿ ಪ್ರಸಕ್ತ ಇರುವ 800 ಭಾರತೀಯರು ಸೇರಿ 6800 ವಿದೇಶಿ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.
ಬೈಡೆನ್ ಅಮೆರಿಕದ ಅಧ್ಯಕ್ಷರಾಗಿದ್ದಾಗ ಏಷ್ಯನ್ ಅಮೆರಿಕನ್ನರ ಕುರಿತ ಸಲಹೆಗಾರರಾಗಿದ್ದ ಅಜಯ್ ಭುತೋರಿಯಾ ಪ್ರತಿಕ್ರಿಯಿಸಿ, ಭಾರತೀಯ ವಿದ್ಯಾರ್ಥಿಗಳು ಅಮೆರಿಕದ ಆರ್ಥಿಕತೆಗೆ ವಾರ್ಷಿಕ 76 ಸಾವಿರ ಕೋಟಿ ರೂ. ಕೊಡುಗೆ ನೀಡುತ್ತಾರೆ. ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರಗಳಲ್ಲಿ ನಾವೀನ್ಯತೆ ತರುತ್ತಾರೆ ಎಂದು ಹೇಳಿದ್ದಾರೆ.