Menu

ಸೆಪ್ಟೆಂಬರ್ 1ರಿಂದ ಆನ್ ಲೈನ್ ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಮುಳ್ಳಯ್ಯನಗಿರಿ ಪ್ರವೇಶ

mullayanagiri

ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದಾದ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಜಿಲ್ಲಾಡಳಿತ ಸೆಪ್ಟೆಂಬರ್ 1ರಿಂದ ಅನ್ವಯವಾಗುವಂತೆ ಹೊಸ ನಿಯಮ ಜಾರಿಗೆ ತಂದಿದೆ.

ಮುಳ್ಳಯ್ಯನಗಿರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದು ಹಾಗೂ ವಾಹನಗಳ ಸಂಖ್ಯೆ ಹೆಚ್ಚಾಗುವುದರಿಂದ ಉಂಟಾಗುವ ಸಂಚಾರಿ ದಟ್ಟಣೆ ತಗ್ಗಿಸಲು ಜಿಲ್ಲಾಡಳಿತ ಹೊಸ ನಿಯಮ ಜಾರಿಗೆ ತಂದಿದೆ.

ಹೊಸ ನಿಯಮದ ಪ್ರಕಾರ ಆನ್ ಲೈ ನ್ ನಲ್ಲಿ ಬುಕ್ಕಿಂಗ್ ಮಾಡಿಕೊಂಡವರಿಗೆ ಮಾತ್ರ ಮುಳ್ಳಯ್ಯನಗಿರಿಗೆ ಪ್ರವೇಶ ದೊರೆಯಲಿದೆ. ಪ್ರತಿದಿನ 600 ವಾಹನಗಳಿಗಷ್ಟೇ ಪ್ರವೇಶ ನಿರ್ಬಂಧಿಸಲಾಗಿದ್ದು, ಮೊದಲು ಬಂದವರಿಗಷ್ಟೇ ಅವಕಾಶ ದೊರೆಯಲಿದೆ.

ಪಶ್ಚಿಮ ಘಟ್ಟಗಳ ತಪ್ಪಲು ದತ್ತಪೀಠ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರ ಗಾಳಿಕೆರೆ ಸೇರಿದಂತೆ ಗಿರಿ ಭಾಗದ ವಿವಿಧ ಪ್ರವಾಸಿ ತಾಣಗಳಿಗೆ ನಿತ್ಯ 600 ವಾಹನಗಳಿಗಷ್ಟೇ ಅವಕಾಶ ಕಲ್ಪಿಸಿದೆ. ಈ ಮೂಲಕ ಗಿರಿಧಾಮಗಳ ಭಾಗದಲ್ಲಿ ಇಷ್ಟು ದಿನ ನಡೆಯುತ್ತಿದ್ದ ಅನಾಹುತಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಮುಂದಾಗಿದೆ.

ವೆಬ್​ಸೈಟ್: ಜಿಲ್ಲಾಡಳಿತ (https://chikkamagaluru.nic.in/en/tourism) ವೆಬ್​ಸೈಟ್ ಆರಂಭಿಸಿದ್ದು, ಬೈಕ್‌, ಆಟೋಗೆ 50 ರೂ., ಕಾರುಗಳಿಗೆ 100 ರೂ., ಟೂಫಾನ್​ ವಾಹನಕ್ಕೆ 150 ರೂ. ಹಾಗೂ ಟೆಂಪೋ ಟ್ರಾವೆಲರ್​ಗೆ 200 ರೂ. ಶುಲ್ಕ ನಿಗದಿಪಡಿಸಲಾಗಿದೆ. ಹಣ ಪಾವತಿಸಿ ದಿನಾಂಕ ಮತ್ತು ಸಮಯವನ್ನು ಮೊದಲೇ ಬುಕ್ಕಿಂಗ್ ಮಾಡಿಕೊಳ್ಳಬೇಕು‌. ಟಿಕೆಟ್ ಬುಕ್ ಮಾಡದಿದ್ದರೆ ವಾಹನ ಪ್ರವೇಶ ಅವಕಾಶ ಸಿಗುವುದಿಲ್ಲ.

ಪ್ರತಿದಿನ ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆವರೆಗೆ ಮೊದಲ ಅವಧಿ ಮತ್ತು ಮಧ್ಯಾಹ್ನ 1ರಿಂದ ಸಂಜೆ 6 ಗಂಟೆವರೆಗೆ 2ನೇ ಅವಧಿ ಎಂದು ಜಿಲ್ಲಾಡಳಿತ ಸಮಯ ನಿಗದಿ ಮಾಡಿದೆ. ಒಂದು ಅವಧಿಗೆ 600 ವಾಹನಗಳಿಗೆ ಅವಕಾಶ ಸೀಮಿತಗೊಳಿಸಲಾಗಿದೆ.

Related Posts

Leave a Reply

Your email address will not be published. Required fields are marked *