Menu

ಇಂದು ಆರ್ ಸಿಬಿ- ಸನ್ ರೈಸರ್ಸ್ ಹಣಾಹಣಿ: 2ನೇ ಸ್ಥಾನದ ಮೇಲೆ ಆರ್ ಸಿಬಿ ಕಣ್ಣು

rcb

ಲಕ್ನೋ: ಒಂಬತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಐಪಿಎಲ್ ಲೀಗ್ ಹಂತದಲ್ಲಿ ಅಗ್ರ ಎರಡು ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಕ್ರವಾರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ.

ಈಗಾಗಲೇ ಪ್ಲೇಆಫ್ ಗೆ ಅರ್ಹತೆ ಪಡೆದಿರುವ ಆರ್ ಸಿಬಿ, 2016ರ ನಂತರ ಅಗ್ರ ಎರಡರಲ್ಲಿ ಸ್ಥಾನ ಗಳಿಸಿಲ್ಲ. ಪ್ರಸ್ತುತ 12 ಪಂದ್ಯಗಳಲ್ಲಿ 17 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಆರ್ ಸಿಬಿ, ಉಳಿದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಅಗ್ರ ಎರಡು ಸ್ಥಾನ ಖಚಿತಪಡಿಸಿಕೊಳ್ಳಬಹುದು.

ಬೆಂಗಳೂರು ತಂಡದ ತವರು ಪಂದ್ಯವಾಗಿದ್ದ ಈ ಶುಕ್ರವಾರದ ಪಂದ್ಯವನ್ನು ಮಳೆಗಾಲದ ಕಾರಣ ಲಕ್ನೋಗೆ ಸ್ಥಳಾಂತರಿಸಲಾಗಿದೆ.  ಹಿಂದಿನ ಪಂದ್ಯ ಮಳೆಯಿಂದ ರದ್ದುಗೊಂಡರೆ, ಎರಡನೇ ಪಂದ್ಯ ಮಳೆಯ ಕಾರಣ ಲಕ್ನೋಗೆ ಸ್ಥಳಾಂತರಗೊಂಡಿದೆ. ಇದರಿಂದ ತವರಿನ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.

ಭಾರತ-ಪಾಕಿಸ್ತಾನ ಮಿಲಿಟರಿ ಸಂಘರ್ಷದಿಂದಾಗಿ ಲೀಗ್ ಅಡಚಣೆಯಾಗುವ ಮೊದಲು ಆರ್ಸಿ ಸತತ ನಾಲ್ಕು ಗೆಲುವುಗಳೊಂದಿಗೆ ಉತ್ತಮ ಫಾರ್ಮ್ ನಲ್ಲಿತ್ತು. ಆದರೆ, ಪುನರಾರಂಭದ ನಂತರ ಅವರ ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಆವೇಗಕ್ಕೆ ಅಡ್ಡಿಯಾಯಿತು. 20 ದಿನಗಳ ವಿರಾಮದ ನಂತರ, ತಂಡ ತನ್ನ ಲಯ ಮತ್ತು ಸ್ಪರ್ಧಾತ್ಮಕತೆ ಉಳಿಸಿಕೊಳ್ಳುತ್ತದೆಯೇ ಎಂಬುದು ಕುತೂಹಲಕಾರಿಯಾಗಿದೆ.

ಕೊಹ್ಲಿ, ಪಾಟಿದಾರ್ ಮಿಂಚು; ಬೌಲಿಂಗ್ ಬಲ:

ಐಪಿಎಲ್ ಪ್ರಶಸ್ತಿಯನ್ನು ಬೆನ್ನಟ್ಟುತ್ತಿರುವ ಆರ್ಸಿ ಇತ್ತೀಚಿನ ವರ್ಷಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್ ನಲ್ಲಿದ್ದು, 11 ಇನ್ನಿಂಗ್ಸ್ ಗಳಲ್ಲಿ ಏಳು ಅರ್ಧಶತಕಗಳನ್ನು ಗಳಿಸಿ ಅಗ್ರ ಕ್ರಮಾಂಕಕ್ಕೆ ಆಧಾರವಾಗಿದ್ದಾರೆ.

ನಾಯಕ ರಜತ್ ಪಾಟಿದಾರ್, ಟಿಮ್ ಡೇವಿಡ್, ಮತ್ತು ರೊಮಾರಿಯೋ ಶೆಫಡರ್್ ಸಹ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ. ಆದರೆ, ವಿರಾಮದ ಮೊದಲು ಪಾಟಿದಾರ್ ಗೆರಫಾರ್ಮ್ ಕುಸಿದಿತ್ತು.

ಮೊದಲ ಐದು ಪಂದ್ಯಗಳಲ್ಲಿ 37.2 ಸರಾಸರಿಯೊಂದಿಗೆ ರನ್ ಗಳಿಸಿದ್ದ ಅವರು, ನಂತರದ ಐದು ಪಂದ್ಯಗಳಲ್ಲಿ 10.6 ಸರಾಸರಿಯಲ್ಲಿ ಕೇವಲ 53 ರನ್ ಗಳಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ತವರು ಪಂದ್ಯದ ವೇಳೆ ಬೆರಳಿನ ಗಾಯದಿಂದಾಗಿ ಸ್ಪ್ಲಿಂಟ್ ಧರಿಸಬೇಕಾಯಿತು. ಆದರೆ, ಗಾಯದಿಂದ ಚೇತರಿಸಿಕೊಂಡು ನೆಟ್ಸ್ನಲ್ಲಿ ಮುಕ್ತವಾಗಿ ಬ್ಯಾಟಿಂಗ್ ಮಾಡುತ್ತಿರುವುದು ಆರ್ಸಿಗೆ ಭರವಸೆಯ ಸಂಕೇತವಾಗಿದೆ.

ಸ್ಪಿನ್ ಜೋಡಿಯಾದ ಕ್ರುನಾಲ್ ಪಾಂಡ್ಯ ಮತ್ತು ಸುಯಶ್ ಶಮರ್ಾ ಅತ್ಯಂತ ಪರಿಣಾಮಕಾರಿಯಾಗಿದ್ದಾರೆ. ಜೋಶ್ ಹೇಝಲ್ವುಡ್ ಮತ್ತು ಯಶ್ ದಯಾಳ್ ವೇಗದ ವಿಭಾಗದಲ್ಲಿ ಕಷ್ಟಕರ ಓವರ್ಗಳನ್ನು ಸುಲಭವಾಗಿ ಬೌಲ್ ಮಾಡಿದ್ದಾರೆ.  ಆದರೆ, ಹೇಜಲ್ವುಡ್ ಗಾಯದಿಂದಾಗಿ ಈ ಪಂದ್ಯಕ್ಕೆ ಲಭ್ಯವಿಲ್ಲ. ಹೆಚ್ಚಿನ ವಿದೇಶಿ ಆಟಗಾರರ ಲಭ್ಯತೆ ಆರ್ಸಿಗೆ ಮತ್ತಷ್ಟು ಬಲ ತಂದಿದೆ.

Related Posts

Leave a Reply

Your email address will not be published. Required fields are marked *