ಇಂದೋರ್‌ನಿಂದ ರಾಜಸ್ಥಾನ ಕಡೆಗೆ ಬಸ್ ಚಲಾಯಿಸುತ್ತಿದ್ದ ಚಾಲಕರೊಬ್ಬರು ಸಹಚಾಲಕನಿಗೆ ಬಸ್ ಚಾಲನೆ ಮಾಡುವುದಕ್ಕೆ ಕೊಟ್ಟ ಸ್ವಲ್ಪ ಹೊತ್ತಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಚಾಲಕ ಸತೀಶ್ ರಾವ್ ಅವರಿಗೆ ರಾಜಸ್ಥಾನದ ಪಾಲಿ ತಲುಪುವಾಗ ಅನಾರೋಗ್ಯ ಕಾಡುತ್ತಿದೆ ಎಂದು ಅನಿಸಲಾರಂಭಿಸಿದೆ. ತಕ್ಷಣ ಬಸ್ ಅನ್ನು ಓಡಿಸುವಂತೆ ಸಹ ಚಾಲಕನಿಗೆ ನೀಡಿದ ಕೆಲವೇ ಹೊತ್ತಿಗೆ ಅಸು ನೀಗಿದ್ದಾರೆ.
ಬಸ್‌ನಲ್ಲಿ ಕುಸಿದು ಬಿದ್ದಿದ್ದ ಅವರನ್ನು ಹತ್ತಿರದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು, ಅಷ್ಟರಲ್ಲಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದಾರೆ. ವಿಷಯ ತಿಳಿದ ನಂತರ ಮರಣೋತ್ತರ ಪರೀಕ್ಷೆಗೆ ಕುಟುಂಬದವರು ನಿರಾಕರಿಸಿದ್ದಾರೆ. ಆಸ್ಪತ್ರೆ ತಲುಪುವ ಮೊದಲೇ ಚಲಿಸುತ್ತಿದ್ದ ಬಸ್ಸಿನಲ್ಲೇ ಮೂರ್ಛೆ ಹೋಗಿ ಪ್ರಾಣ ಹೋಗಿರುವುದು ಕ್ಯಾಮೆರಾದಲ್ಲಿ ದಾಖಲಾಗಿದೆ.