Menu

ಹಾರ್ವರ್ಡ್ ವಿವಿ ವಿದೇಶಿ ವಿದ್ಯಾರ್ಥಿಗಳಿಗೆ ಕ್ಲೋಸ್‌ ಎಂದ ಟ್ರಂಪ್‌

ಅಮೆರಿಕದ ಪ್ರತಿಷ್ಠಿತ ಹಾರ್ವರ್ಡ್​ ವಿಶ್ವವಿದ್ಯಾಲಯದಲ್ಲಿ ವಿದೇಶಿ ವಿದ್ಯಾರ್ಥಿಗಳ ಪ್ರವೇಶವನ್ನು ಟ್ರಂಪ್ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿರುವುದಾಗಿ ಟ್ರಂಪ್ ಅವರ ಗೃಹ ಭದ್ರತಾ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಅಧಿಕೃತ ಎಕ್ಸ್​ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

ಟ್ರಂಪ್ ಸರ್ಕಾರದ ಈ ನಿರ್ಧಾರ ಪ್ರಪಂಚದಾದ್ಯಂತ ಅದೆಷ್ಟೋ ವಿದ್ಯಾರ್ಥಿಗಳ ಹಾರ್ವರ್ಡ್‌ ವಿವಿಯಲ್ಲಿ ಓದ ಬೇಕೆಂಬ ಕನಸನ್ನು ಕಮರಿಸಿದೆ. 2025ರ ಕ್ಯೂಎಸ್ ವಿಶ್ವವಿದ್ಯಾಲಯಗಳ ಶ್ರೇಯಾಂಕದಲ್ಲಿ ಹಾರ್ವರ್ಡ್‌ ವಿವಿ ನಾಲ್ಕನೇ ಸ್ಥಾನದಲ್ಲಿದೆ.

ಈಗಾಗಲೇ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ದಾಖಲು ಆಗಿರುವ ವಿದ್ಯಾರ್ಥಿಗಳನ್ನು ಬೇರೆ ಕಾಲೇಜುಗಳಿಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಐವಿ ಲೀಗ್ ಸಂಸ್ಥೆ  ಈಶಾನ್ಯ ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಎಂಟು ಅತ್ಯಂತ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯಗಳ ಗುಂಪಾಗಿದ್ದು, ಅವುಗಳ ಅತ್ಯುತ್ತಮ ಶೈಕ್ಷಣಿಕ, ಶ್ರೇಷ್ಠತೆ ಮತ್ತು ಸಾಮಾಜಿಕ ಪ್ರತಿಷ್ಠೆಗೆ ಹೆಸರುವಾಸಿಯಾಗಿದೆ. ಬ್ರೌನ್, ಕೊಲಂಬಿಯಾ, ಕಾರ್ನೆಲ್, ಡಾರ್ಟ್ಮೌತ್, ಹಾರ್ವರ್ಡ್, ಪ್ರಿನ್ಸ್ಟನ್, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಮತ್ತು ಯೇಲ್ ಇದರಲ್ಲಿ ಸೇರಿದೆ.

ಹಾರ್ವರ್ಡ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳಿಂದ ಹಿಂಸಾತ್ಮಕ ಮತ್ತು ಯೆಹೂದಿ ವಿರೋಧಿ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಸರ್ಕಾರ ಆರೋಪಿಸಿದೆ. ವಿಶ್ವವಿದ್ಯಾನಿಲಯವು ಹಮಾಸ್ ಪರವಾದ ಸಿದ್ಧಾಂತವನ್ನು ಪ್ರಚಾರ ಮಾಡು ತ್ತಿದೆ. ವಿದೇಶಿ ವಿದ್ಯಾರ್ಥಿಗಳ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸರ್ಕಾರದೊಂದಿಗೆ ಹಂಚಿಕೊಳ್ಳು ತ್ತಿಲ್ಲ ಎಂಬ ಆರೋಪ ಹಾರ್ವರ್ಡ್ ಮೇಲಿದೆ.

ಟ್ರಂಪ್‌ ಸರ್ಕಾರದ ಈ ನಿರ್ಧಾರವು ಅನೇಕ ಭಾರತೀಯರ ಮೇಲೂ ಪರಿಣಾಮ ಬೀರುತ್ತದೆ. ಹಾರ್ವರ್ಡ್‌ನಲ್ಲಿ ಓದುತ್ತಿ ರುವ ಅಥವಾ ಈ ವರ್ಷ ಅಲ್ಲಿ ಪ್ರವೇಶ ಪಡೆಯಲು ತಯಾರಿ ನಡೆಸುತ್ತಿರುವ ಭಾರತೀಯ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರತಿ ವರ್ಷ 1000 ಭಾರತೀಯ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆಯು ತ್ತಾರೆ. ವಿದ್ಯಾರ್ಥಿಗಳು 100 ಕ್ಕೂ ಹೆಚ್ಚು ದೇಶಗಳಿಂದ ಬರುತ್ತಾರೆ, ಹಾರ್ವರ್ಡ್ ವಿಶ್ವವಿದ್ಯಾಲಯವು ಮ್ಯಾಸ ಚೂಸೆಟ್ಸ್‌ನ ಕೇಂಬ್ರಿಡ್ಜ್‌ನಲ್ಲಿರುವ ಕ್ಯಾಂಪಸ್‌ನಲ್ಲಿ 6,800 ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ದಾಖಲಿಸುತ್ತದೆ.

Related Posts

Leave a Reply

Your email address will not be published. Required fields are marked *