Menu

ಕೋವಿಡ್‌ ಅಲರ್ಟ್‌: ಆಂಧ್ರಪ್ರದೇಶದಲ್ಲಿ ಮಾಸ್ಕ್‌ ಕಡ್ಡಾಯ

ದೇಶಾದ್ಯಂತ ಕೋವಿಡ್‌ ಪ್ರಕರಣಗಳು ನೀಧಾನಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರವು ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಿದೆ.

ಗುಂಪು, ಸಭೆ ಸಮಾರಂಭಗಳಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಪ್ರಕಟಿಸಿದೆ.

ಆಂಧ್ರ ಪ್ರದೇಶದಲ್ಲಿ ಗುರುವಾರ ಒಂದೇ ದಿನ 19 ಪಾಸಿಟಿವ್‌ ಕೇಸ್‌ ದಾಖಲಾಗಿದೆ. ಗುಜರಾತ್‌ನಲ್ಲೂ 15 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕೇರಳದಲ್ಲಿ 186 ಕೇಸ್ ಇದ್ದು 95 ಸಕ್ರಿಯ ಪ್ರಕರಣಗಳು ಇವೆ. ಕರ್ನಾಟಕದಲ್ಲಿ 33 ಕೇಸ್ ದಾಖಲಾಗಿದ್ದು 16 ಸಕ್ರಿಯ ಪ್ರಕರಣಗಳಾಗಿವೆ.

ಚೀಣಾ ಮತ್ತು ಸಿಂಗಾಪುರಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿರುವುದಾಗಿ ಕಳೆದ ವಾರ ವರದಿಯಾಗಿತ್ತು. ಈ ಬಾರಿ ಕೋವಿಡ್‌ -19 ರೂಪಾಂತರ ತಳಿ ವ್ಯಾಪಿಸುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *