Menu

ಚಳ್ಳಕೆರೆಯಲ್ಲಿ ಒಂದೇ ಮಾವಿನ ಮರದಲ್ಲಿ 8 ತಳಿ ಫಸಲು

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹಾಲಿಗೊಂಡನಹಳ್ಳಿ ರೈತ ರುದ್ರಮುನಿಯಪ್ಪ ಒಂದೇ ಮಾವಿನ ಗಿಡಕ್ಕೆ‌ 12 ತಳಿ ಮಾವು ಕಸಿ ಮಾಡಿದ್ದು, ಈಗ 8 ತಳಿಗಳು ಫಸಲು ನೀಡಿವೆ, ಇದನ್ನು ನೋಡಿ ಸ್ಥಳೀಯರು ಬೆರಗಾಗಿದ್ದಾರೆ.

ಒಂದೇ ಮರದಲ್ಲಿ 8 ವಿವಿಧ ತಳಿಯ ಮಾವಿನ ಹಣ್ಣು ಕೃಷಿಕರಲ್ಲಿ ಆಸಕ್ತಿ ಮತ್ತು ಕುತೂಹಲ ಕೆರಳಿಸಿದೆ. ರೈತ ರುದ್ರಮುನಿಯಪ್ಪ ಬೇನಿಷಾ ಮಾವಿನ ತಳಿಗೆ- ರೇಸರ್, ಆಲ್ಫಾನ್ಸೋ, ತೋತಾಪುರಿ, ಸೇರಿ ದೇಸೀ ಮಾವಿನ ಕಸಿ ಮಾಡಿದ್ದರು.

ಹಾಲಿಗೊಂಡನಹಳ್ಳಿಯಲ್ಲಿ 4 ಎಕರೆ ಜಮೀನಿ ಹೊಂದಿರುವ ರುದ್ರಮುನಿಯಪ್ಪ ಮತ್ತು ವೀರುಪಾಕ್ಷಪ್ಪ ಸಹೋದರರು 4 ಎಕರೆ ಜಮೀನಲ್ಲಿ 100 ಮಾವಿನ‌ ಮರ ಬೆಳೆಸಿದ್ದಾರೆ. ಕಳೆದ 6 ವರ್ಷಗಳಿಂದ ಮಾವಿನ‌ ಮರಗಳನ್ನು ಪಾಲನೆ ಮಾಡುತ್ತ ಬಂದಿದ್ದಾರೆ. ಮಾವು ಕೃಷಿ ಜೊತೆಗೆ ಜೇನು, ರೇಶ್ಮೆ ಸೇರಿದಂತೆ ಸಮಗ್ರ ಕೃಷಿ ಮಾಡುತ್ತಿದ್ದಾರೆ. 8 ತಳಿಯ ಮಾವು ಒಂದೇ ಮರದಲ್ಲಿ ಬೆಳೆದು ಮಾದರಿ ಮಾವು ಕೃಷಿಕರಾಗಿ ಹೆಸರಾಗಿದ್ದಾರೆ.

Related Posts

Leave a Reply

Your email address will not be published. Required fields are marked *