ನಾಲ್ಕು ವರ್ಷದ ಮಗನಿಗೆ ವಿಷವುಣಿಸಿದ ಬಳಿಕ ಉದ್ಯಮಿ ಹಾಗೂ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಹಜಹಾನ್ಪುರದಲ್ಲಿ ನಡೆದಿದೆ. ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯ ದುರ್ಗಾ ಎನ್‌ಕ್ಲೇವ್ ಕಾಲೊನಿಯಲ್ಲಿ ಮಗು ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದು, ಪೋಷಕರಾದ ಸಚಿನ್ ಗ್ರೋವರ್ ಮತ್ತು ಪತ್ನಿ ಶಿವಾಂಗಿ ಮನೆಯ ಪ್ರತ್ಯೇಕ ಕೋಣೆಗಳಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಾಲಬಾಧೆಯೇ ಈ ದುರಂತಕ್ಕೆ ಕಾರಣಎನ್ನಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ದ್ವಿವೇದಿ ಮತ್ತು ವೃತ್ತ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿದ್ದು, ಸಚಿನ್ ಅವರ ಮೊಬೈಲ್‌ನಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದ್ದು, ಅದರಲ್ಲಿ ಆರ್ಥಿಕ ಸಂಕಷ್ಟದ ಬಗ್ಗೆ ಉಲ್ಲೇಖವಿದೆ. ಸಚಿನ್ ಗ್ರೋವರ್ ಮೋಹನ್‌ಗಂಜ್‌ನಲ್ಲಿ ಹ್ಯಾಂಡ್ಲೂಮ್ ಶೋ ರೂಂ ನಡೆಸುತ್ತಿದ್ದರು. ಕುಟುಂಬದ ಎರಡು ಅಂತಸ್ತಿನ ಮನೆಯ ಎರಡನೇ ಮಹಡಿಯಲ್ಲಿ ಪತ್ನಿ ಮತ್ತು ಮಗನೊಂದಿಗೆ ವಾಸಿಸುತ್ತಿದ್ದರು, ಅದೇ ಕಟ್ಟಡದಲ್ಲಿ ಸಹೋದರರಾದ ರೋಹಿತ್ ಮತ್ತು ಮೋಹಿತ್ ಕುಟುಂಬಗಳೊಂದಿಗೆ ವಾಸಿಸುತ್ತಿದ್ದರು.
ಮೋಹಿತ್ ಮಗನ ನಾಮಕರಣ ಸಮಾರಂಭಕ್ಕೆ ಕುಟುಂಬ ಸಿದ್ಧತೆ ನಡೆಸುತ್ತಿತ್ತು. ಬೆಳಗ್ಗೆ 8 ಗಂಟೆಯಾದರೂ ಅವರು ಕೆಳಗೆ ಬಾರದಿದ್ದಾಗ, ಕುಟುಂಬವು ಅವರನ್ನು ಕರೆತರಲು ಹೋಗಿತ್ತು.
ಮೇಲಕ್ಕೆ ಹೋಗಿ ಬಾಗಿಲು ತೆರೆದಾಗ ಸಚಿನ್ ಒಂದು ಕೋಣೆಯಲ್ಲಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದ್ದು, ಶಿವಾಂಗಿ ಇನ್ನೊಂದು ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದು, ಬಾಲಕ ಹಾಸಿಗೆಯ ಮೇಲೆ ಬಿದ್ದಿದ್ದು ಬಾಯಲ್ಲಿ ನೊರೆ ಬರುತ್ತಿತ್ತು ಎಂದು ಎಂದು ಸಚಿನ್ ತಾಯಿ ಸೀಮಾ ಪೊಲೀಸರಿಗೆ ತಿಳಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು
ತನಿಖೆ ಮುಂದುವರಿಸಿದ್ದಾರೆ.