ನ್ಯೂಯಾರ್ಕ್: ಭಾರತ ಮೂಲದ ಹಿರಿಯ ಲೇಖಕ ಸಲ್ಮಾನ್ ರಶ್ದಿ ಮೇಲೆ ಹಲ್ಲೆ ನಡೆಸಿ ಒಂದು ಕಣ್ಣು ಕಾಣದಂತೆ ಮಾಡಿದ್ದ ಆರೋಪಿಗೆ 25 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
2022ರಲ್ಲಿ ನ್ಯೂಯಾರ್ಕ್ ಲೆಕ್ಚರರ್ ವೇದಿಕೆಗೆ ತೆರಳುವಾಗ ಸಲ್ಮಾನ್ ರಶ್ದಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ 27 ವರ್ಷದ ಹ್ಯಾಡಿ ಮಟರ್ ಗೆ ಕೊಲೆ ಯತ್ನ ಹಾಗೂ ಹಲ್ಲೆ ಆರೋಪ ಕಳೆದ ಫೆಬ್ರವರಿಯಲ್ಲೇ ಸಾಬೀತಾಗಿದ್ದು, ಶನಿವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಯಿತು.
ತೀರ್ಪು ಪ್ರಕಟ ವೇಳೆ ಸಲ್ಮಾನ್ ರಶ್ದಿ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ತೀರ್ಪು ಪ್ರಕಟಿಸುವ ಮುನ್ನ ನ್ಯಾಯಾಧೀಶರು ಮಾತನಾಡುವ ಹಕ್ಕು ನೀಡಿದ್ದರ ಹಿನ್ನೆಲೆಯಲ್ಲಿ ಹ್ಯಾಡಿ ಮಟರ್, ಸಲ್ಮಾನ್ ರಶ್ದಿ ಇತರೆ ಜನರನ್ನು ದ್ವೇಷಿಸುತ್ತಾರೆ. ಅವರಿಗೆ ಗೌರವ ತರುವುದಿಲ್ಲ, ನನ್ನನ್ನು ಗುರಿ ಮಾಡಲಾಗಿದೆ ಎಂದು ಅವರು ಹೇಳಿದರು.