ಬೆಂಗಳೂರಲ್ಲಿ ಮೇ 17ರಿಂದ ಭಾರಿ ಮಳೆಯಾಗಲಿದ್ದು, ಕರ್ನಾಟಕದ 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸ ಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಯಚೂರು, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ತುಮಕೂರು, ವಿಜಯಪುರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಜಗಳೂರು, ಹರಪನ ಹಳ್ಳಿ, ಬೇಗೂರು, ಕೋಣನೂರು, ಚಿಂತಾಮಣಿ, ಚಿತ್ತಾಪುರ, ಹುಣಸೂರು, ಹೊಸಕೋಟೆ, ಎಲೆಕ್ಟ್ರಾನಿಕ್ಸಿಟಿ, ರಾಯ ಲ್ಪಾಡು, ಚಾಮರಾಜನಗರ, ಲಕ್ಷ್ಮೇಶ್ವರ, ಬೀದರ್, ನಾಯಕನಹಟ್ಟಿ, ಹಿರಿಯೂರು, ನಾಪೋಕ್ಲು, ಕಡೂರು, ಅಂಕೋಲಾ, ಚಿಕ್ಕಬಳ್ಳಾಪುರ, ಬೆಂಗಳೂರು ಕೆಐಎಎಲ್, ಕಳಸ, ಶಿಗ್ಗಾಂವ್, ಚಿಟಗುಪ್ಪ, ಲೋಂಡಾ, ಗೋಕರ್ಣದಲ್ಲಿ ಮಳೆಯಾಗಿದೆ.
ನಿನ್ನೆ ಚಿತ್ರದುರ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದು ಹಳ್ಳ ಕೊಳ್ಳಗಳು ತುಂಬಿವೆ, ಮೊಳಕಾಲ್ಮೂರು ತಾಲೂಕಿನ ಬಾಂಡ್ರವಿ ಗ್ರಾಮದಲ್ಲಿ ಹಳ್ಳಕ್ಕೆ ಮೇಯಲು ಹೋಗಿದ್ದ ಎಮ್ಮೆಗಳು ತೇಲಿ ಹೋಗಿದ್ದು, ಮಾಲೀಕನಿಗೆ ಲಕ್ಷಾಂತರ ರೂ. ನಷ್ಟವುಂಟಾಗಿದೆ. ಮತ್ತೊಂದೆಡೆ ಮಳೆಯು ರೈತರ ಮೊಗದಲ್ಲಿ ಸಂತಸ ತುಂಬಿದೆ.