ಸಣ್ಣ ಹಾಗೂ ತಳಮಟ್ಟದಲ್ಲಿ ಹಾರಾಡುವ ಡ್ರೋಣ್ ಗಳನ್ನು ಹೊಡೆದುರುಳಿಸುವ ಭಾರ್ಗವಾಸ್ತ್ರವನ್ನು ಭಾರತ ಯಶಸ್ವಿ ಪ್ರಯೋಗ ನಡೆಸಿದೆ. ಈ ಮೂಲಕ ಭಾರತದ ಬತ್ತಳಿಕೆಗೆ ಮತ್ತೊಂದು ಅಸ್ತ್ರ ಸೇರ್ಪಡೆಯಾಗಿದೆ.
ಸೋಲಾರ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಲಿಮಿಟೆಡ್ ಸಂಸ್ಥೆ ಅಭಿವೃದ್ಧಿಪಡಿಸಿದ ಗೋಪಾಲಪುರ ಸಮುದ್ರ ತೀರದ ಫೈರಿಂಗ್ ವಲಯದಲ್ಲಿ ಬುಧವಾರ ಯಶಸ್ವಿಯಾಗಿ ಪ್ರಯೋಗ ನಡೆಸಲಾಯಿತು.
ಭಾರ್ಗವಾಸ್ತ್ರ ಕ್ಷಿಪಣಿಯು ಮೈಕ್ರೊ ಡ್ರೋಣ್, ಕಡಿಮೆ ವೆಚ್ಚದ ಡ್ರೋಣ್ ಹಾಗೂ ತಳಮಟ್ಟದಲ್ಲಿ ದಾಳಿ ನಡೆಸಬಲ್ಲ ಡ್ರೋಣ್ ಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಈ ಮೂಲಕ ನೆರೆಯ ಪಾಕಿಸ್ತಾನ ಕೆಲವು ದಿನಗಳ ಹಿಂದೆ ನಡೆಸಿದ ಚೀನಾ ನಿರ್ಮಿತ ಸಣ್ಣ ಡ್ರೋಣ್ ದಾಳಿಯನ್ನು ಭಾರತ ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿ ಎದುರಿಸುವ ಬೆಳೆಸಿಕೊಂಡಿದೆ.
ಆರ್ಮಿ ಏರ್ ಡಿಫೆನ್ಸ್ ಅಧಿಕಾರಿಗಳ ಸಮ್ಮುಖದಲ್ಲಿ ಮೇ 13ರಂದು ಮೂರು ಸುತ್ತಿನ ಪರೀಕ್ಷೆ ನಡೆಸಲಾಯಿತು. ಇದರಲ್ಲಿ ಎರಡು ಬಾರಿ ಫೈರಿಂಗ್ ರಾಕೆಟ್ ಮೂಲಕ ಪ್ರಯೋಗ ನಡೆಸಲಾಯಿತು.
ಸಾಲ್ವೋ ಮೋಡ್ ನಲ್ಲಿ ಮತ್ತೆರಡು ರಾಕೆಟ್ ಗಳನ್ನು ಉಡಾಯಿಸಲಾಗಿದ್ದು, ನಾಲ್ಕು ಮಾದರಿಯ ಪರೀಕ್ಷೆಗಳಲ್ಲಿ ರಾಕೆಟ್ ನಿಖರ ಗುರಿಯನ್ನು ಯಶಸ್ವಿಯಾಗಿ ತಲುಪಿತು. ಮುಂದಿನ ದಿನಗಳಲ್ಲಿ ಈ ರಾಕೆಟ್ ಗಳ ಉತ್ಪಾದನೆ ಭಾರೀ ಪ್ರಮಾಣದಲ್ಲಿ ನಡೆಯಲಿದೆ.
2.5 ಕಿ.ಮೀ. ವ್ಯಾಪ್ತಿಯಲ್ಲಿ ನಿಗದಿತ ಗುರಿ ಹೊಂದಿಲ್ಲದೇ ಏಕಾಏಕಿ ದಾಳಿ ನಡೆಸುವ ಡ್ರೋಣ್ ಗಳನ್ನು ಈ ಮಿನಿ ರಾಕೆಟ್ ಹೊಡೆದುರುಳಿಸುತ್ತದೆ. 20 ಮೀಟರ್ ಎತ್ತರದಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿರುವ ಈ ರಾಕೆಟ್ ಎರಡನೇ ಸ್ತರದಲ್ಲಿ ಕಾರ್ಯ ನಿರ್ವಹಿಸಲಿದೆ.
ಸಮುದ್ರ ಮಟ್ಟಕ್ಕಿಂತ 5000 ಅಡಿ ಎತ್ತರ ಪ್ರದೇಶದವರೆಗೆ ಈ ರಾಕೆಟ್ ಗಳು ಪರಿಣಾಮಕಾರಿ ಕಾರ್ಯ ನಿರ್ವಹಿಸಿಬಲ್ಲದಾಗಿದೆ. ರಾಡರ್ ಗಳು ಡ್ರೋಣಗಳನ್ನು ಪತ್ತೆ ಹಚ್ಚಿದ 6ರಿಂದ 10 ಕಿ.ಮೀ. ದೂರದಲ್ಲೇ ಡ್ರೋಣ್ ಗಳನ್ನು ಹೊಡೆದುಳಿಸುತ್ತದೆ.