ಚಿಕ್ಕಮಗಳೂರು: ದಾಂಧಲೆ ಮಾಡುತ್ತಾ ಮಲೆನಾಡು ಭಾಗದಲ್ಲಿ ಆತಂಕ ಸೃಷ್ಟಿಸಿದ್ದ ಕುಳ್ಳ ಎಂದೇ ಕುಖ್ಯಾತಿ ಪಡೆದಿದ್ದ ಕಾಡಾನೆ ಕಳೆದ ನಾಲ್ಕು ದಿನಗಳಿಂದ ನಡೆದ ಆಪರೇಷನ್ ಯಶಸ್ವಿಯಾಗಿ ಸಿಕ್ಕಿಬಿದ್ದಿದ್ದಾನೆ.
ಕುಳ್ಳ ಕಾಡಾನೆ ಸೆರೆಸಿಕ್ಕಿದ್ದರಿಂದ ಹಾಸನ, ಚಿಕ್ಕಮಗಳೂರು ಜಿಲ್ಲೆಯ ಅರಣ್ಯದಂಚಿನ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸಂಚರಿಸಿ ದಾಂಧಲೆ ಮಾಡುತ್ತಾ ಉಪಟಳ ನೀಡುತ್ತಿದ್ದ ಕಾಡಾನೆ ಕುಳ್ಳನ ಸೆರೆಗಾಗಿ ಕಳೆದ ನಾಲ್ಕು ದಿನದಿಂದ ಮೂಡಿಗೆರೆ ತಾಲೂಕಿನಲ್ಲಿ ಕಾರ್ಯಚರಣೆ ನಡೆದಿತ್ತು. ಕುಳ್ಳ ಕುಮ್ಕಿ ಆನೆ ಭೀಮನ ಜೊತೆ ಏಕಲವ್ಯ ತಂಡ ನಡೆಸಿದ ರಣರೋಚಕ ಕಾರ್ಯಚರಣೆಯಲ್ಲಿ ಕುಳ್ಳ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ಕುಳ್ಳ ಮಾನವರ ಮೇಲೆ ದಾಳಿಗೆ ಯತ್ನಿಸಿ ಆತಂಕದ ವಾತಾವರಣ ಸೃಷ್ಟಿ ಮಾಡಿದ್ದ. ಹೆಚ್ಚು ಸಂಚಾರ ಮಾಡುತ್ತಿದ್ದ ಗ್ರಾಮಗಳಿಂದ ಕುಳ್ಳನ ಸೆರೆಗಾಗಿ ರಾಜ್ಯ ಸರ್ಕಾರಕ್ಕೆ ಚಿಕ್ಕಮಗಳೂರು ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿ ಸರ್ಕಾರದಿಂದ ಸೆರೆ ಕಾರ್ಯಚರಣೆಗೆ ಅನುಮತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಕೊನೆಗೂ ಕುಳ್ಳ ನನ್ನು ಸೆರೆ ಹಿಡಿದಿದ್ದಾರೆ.
ನಿರಂತರವಾಗಿ ನಡೆದ ಕಾರ್ಯಚರಣೆಯಲ್ಲಿ ಕುಳ್ಳ ಮೂಡಿಗೆರೆ ತಾಲೂಕಿನ ಹಾಂದಿ ಬಳಿ ಸೆರೆಸಿಕ್ಕಿದ್ದು,ಆತನ ದಾಳಿಆತಂಕದಲ್ಲಿದ್ದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.