ಭಾರತದ ಆಪರೇಷನ್ ಸಿಂಧೂರ್‌ನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ತಲಾ 1 ಕೋಟಿ ರೂಪಾಯಿ ಪರಿಹಾರ ಘೋಷಿಸುವ ಮೂಲಕ ಆ ರಾಷ್ಟ್ರವು ಉಗ್ರರಿಗೆ ನೀಡುತ್ತಿರುವ ಬೆಂಬಲವನ್ನು ವ್ಯಕ್ತಪಡಿಸಿದಂತಾಗಿದೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ನಡೆದ ಈ ಕಾರ್ಯಾಚರಣೆಯಲ್ಲಿ, ಉಗ್ರ ಮಸೂದ್ ಅಜರ್ ಕುಟುಂಬದ 14 ಸದಸ್ಯರು ಸತ್ತಿದ್ದು, ಅವರಿಗೆ 14 ಕೋಟಿ ರೂಪಾಯಿ ಪರಿಹಾರ ಸಿಗಲಿದೆ. ಈ ಮೂಲಕ ಉಗ್ರರು ಪಾಕಿಸ್ತಾನ ಸರ್ಕಾರದ ಆಪ್ತರು ಎಂಬುದು ನಿಚ್ಚಳಗೊಂಡಿದೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದ ಉಗ್ರರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸರ್ಕಾರದ ಪ್ರಮುಖ ಅಧಿಕಾರಿಗಳು ಭಾಗಿಯಾಗಿದ್ದರು. ಈ ಪೋಟೊಗಳನ್ನು ಭಾರತ ಸೇನೆ ಬಿಡುಗಡೆ ಮಾಡಿತ್ತು, ಇದೀಗ ಅಲ್ಲಿನ ಸರ್ಕಾರವು ಮೃತ ಉಗ್ರರಿಗೆ ಪರಿಹಾರ ಘೋಷಣೆ ಮಾಡಿದೆ.
ಸದಾ ಉಗ್ರರಿಗೆ ತನ್ನ ನೆಲದಲ್ಲಿ ಆಶ್ರಯ ನೀಡುತ್ತ ಬಂದಿರುವ ಪಾಕಿಸ್ತಾನವು ತನ್ನ ವಿನಾಶವನ್ನು ತಾನೇ ಮಾಡಿಕೊಳ್ಳುತ್ತಿದ್ದರೂ ಉಗ್ರರ ಮೂಲಕ ಭಾರತದ ವಿರುದ್ಧ ಪಿತೂರಿಯನ್ನು ಮುಂದುವರಿಸುತ್ತ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬುದನ್ನು ಉಗ್ರರ ವಿಚಾರದಲ್ಲಿ ಆ ರಾಷ್ಟ್ರ ನಡೆದುಕೊಳ್ಳುತ್ತಿರುವ ರೀತಿಯೇ ಹೇಳುತ್ತಿದೆ.